ಲಸಿಕೆ ಅಭಿಯಾನ: ಪ್ರಧಾನಿ ಮೋದಿಗೆ ಇಂಪಾರ್ಟೆಂಟ್ ವರದಿ ಸಲ್ಲಿಕೆ

masthmagaa.com:

ಏಮ್ಸ್​ ವೈದ್ಯರು, ಕೋವಿಡ್ ನ್ಯಾಷನಲ್ ಟಾಸ್ಕ್​ ಫೋರ್ಸ್​​ನ ಸದಸ್ಯರನ್ನೊಳಗೊಂಡ ಪಬ್ಲಿಕ್ ಹೆಲ್ತ್​ ಎಕ್ಸ್​​ಪರ್ಟ್​​​​ಗಳ ಗುಂಪೊಂದು ಪ್ರಧಾನಿ ಮೋದಿಗೆ ವರದಿ ನೀಡಿದ್ದಾರೆ. ಸಾಮೂಹಿಕ, ವಿವೇಚನೆಯಿಲ್ಲದ, ಅಪೂರ್ಣವಾದ ಲಸಿಕೆ ಅಭಿಯಾನ ಹೊಸ ರೂಪಾಂತರಿ ತಳಿಗಳ ಹುಟ್ಟಿಗೆ ಕಾರಣವಾಗಬಹುದು. ಹೀಗಾಗಿ ಈಗಾಗಲೇ ಕೊರೋನಾ ಬಂದು ಚೇತರಿಸಿಕೊಂಡಿರೋರಿಗೆ ಲಸಿಕೆ ಹಾಕೋ ಅಗತ್ಯವಿಲ್ಲ ಅಂತ ಎಚ್ಚರಿಸಿದ್ದಾರೆ. Indian Public Health Association (IPHA), Indian Association of Preventive and Social Medicine (IAPSM) and Indian Association of Epidemiologists (IAE) ತಜ್ಞರ ಗುಂಪು ಈ ವರದಿ ಸಿದ್ಧಪಡಿಸಿದೆ. ಇದ್ರಲ್ಲಿ ಮಕ್ಕಳು ಸೇರಿದಂತೆ ಸಾಮೂಹಿಕವಾಗಿ ಎಲ್ಲರಿಗೂ ಲಸಿಕೆ ಹಾಕೋ ಬದಲು ದುರ್ಬಲರಿಗೆ, ಅಪಾಯದಲ್ಲಿರೋರಿಗೆ ಲಸಿಕೆ ಹಾಕೋದು ಪ್ರಮುಖ ಗುರಿಯಾಗಬೇಕು. ಗ್ರಾಮೀಣ ಭಾಗದ ಆರೋಗ್ಯ ಸಂಸ್ಥೆಗಳಿಗೆ ಲಸಿಕೆ ಪೂರೈಕೆಗೆ ಆದ್ಯತೆ ನೀಡಬೇಕು ಅಂತ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಅಂದಹಾಗೆ ಕಳೆದ ವರ್ಷ ಏಪ್ರಿಲ್​​ನಲ್ಲಿ ದೇಶದಲ್ಲಿ ಕೊರೋನಾ ವಿರುದ್ಧ ಹೋರಾಟಕ್ಕೆ ಅಗತ್ಯವಾದ ಸಲಹೆಗಳನ್ನು ನೀಡಲು ಈ ತಜ್ಞರ ಗುಂಪನ್ನು ರಚಿಸಲಾಗಿತ್ತು.

-masthmagaa.com

Contact Us for Advertisement

Leave a Reply