ಅಫ್ಘಾನಿಸ್ತಾನಕ್ಕೆ ನೆರವು ನೀಡುವ ನಿರ್ಣಯ ಪಾಸ್!

masthmagaa.com:

ಅಫ್ಘಾನಿಸ್ತಾನದ ಜನತೆಗೆ ಮಾನವೀಯ ನೆರವು ನೀಡಲು ಮತ್ತು ಆ ದುಡ್ಡು ತಾಲಿಬಾನಿಗಳ ಕೈಗೆ ಸೇರಬಾರದು ಅಂತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ. ಅಮೆರಿಕ ಮಂಡಿಸಿದ ಈ ಮಸೂದೆಗೆ ಎಲ್ಲರೂ ಸರ್ವಾನುಮತದಿಂದ ಒಪ್ಪಿದ್ದಾರೆ. ತಾಲಿಬಾನಿಗಳ ಟೇಕೋವರ್ ಬಳಿಕ ಅಫ್ಘಾನಿಸ್ತಾನದ ಫಂಡ್​​ಗಳನ್ನು ಫ್ರೀಜ್‌​ ಮಾಡಿ, ಆರ್ಥಿಕ ದಿಗ್ಬಂದನಗಳನ್ನು ಹೇರಲಾಗಿತ್ತು. ಆದ್ರೆ ಈ ನಿರ್ಣಯ ಮುಂದಿನ ಒಂದು ವರ್ಷದವರೆಗೆ ಅಫ್ಘಾನಿಸ್ತಾನಕ್ಕೆ ಮಾನವೀಯ ಸಹಾಯ ಹರಿದುಬರಲು ಅವಕಾಶ ನೀಡಲಿದೆ. ಈ ನಡೆಯನ್ನು ಸ್ವಾಗತಿಸಿರೋ ತಾಲಿಬಾನ್ ವಕ್ತಾರ ಝೈಬುಲ್ಲಾ ಮುಜಾಹಿದ್​​​​​, ಇದ್ರಿಂದ ಅಫ್ಘನಿಸ್ತಾನದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಅಂತ ಹೇಳಿದ್ದಾರೆ. ಜೊತೆಗೆ ತಾಲಿಬಾನ್​​ಗೆ ಸಂಬಂಧಿಸಿದ ಸಂಸ್ಥೆಗಳ ಮೇಲಿನ ನಿರ್ಬಂಧಗಳನ್ನು ಕೂಡ ತೆಗೆದು ಹಾಕಬೇಕು ಅಂತ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply