28 ವರ್ಷ ಹಿಂದಿನ ಕೇಸ್​​ನಲ್ಲಿ ಶಾಸಕರಿಗೆ ಜೈಲು! ಮಾಡಿದ್ದ ತಪ್ಪೇನು?

masthmagaa.com:

ಉತ್ತರ ಪ್ರದೇಶದ ಅಯೋಧ್ಯೆಯ ಗೊಸೈಗಂಜ್​ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ತಿವಾರಿಗೆ ಕೋರ್ಟ್​ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. 28 ವರ್ಷಗಳ ಹಿಂದೆ ಇಂದ್ರ ಪ್ರತಾಪ್ ಕಾಲೇಜಿಗೆ ಅಡ್ಮಿಷನ್ ಆಗುವಾಗ ನಕಲಿ ಮಾರ್ಕ್ಸ್​ಶೀಟ್ ಕೊಟ್ಟಿದ್ರು ಅನ್ನೋದು ಆರೋಪ. ವಿಚಾರಣೆ ನಡೆಸಿರೋ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆಯ ಜೊತೆಗೆ 8,000 ರೂಪಾಯಿ ದಂಡ ಕೂಡ ವಿಧಿಸಿದೆ. 1990ರಲ್ಲಿ ಡಿಗ್ರಿಯಲ್ಲಿ ಓದುತ್ತಿದ್ದ ಇಂದ್ರ ಪ್ರತಾಪ್​​, 2ನೇ ವರ್ಷ ಫೇಲ್ ಆದ್ರೂ ಕೂಡ ನಕಲಿ ಮಾರ್ಕ್ಸ್​​ ಕಾರ್ಡ್​ ನೀಡಿ 3ನೇ ವರ್ಷಕ್ಕೆ ಪ್ರವೇಶ ಪಡೆದಿದ್ರು. 1992ರಲ್ಲಿ ಈ ಬಗ್ಗೆ ಸಾಕೇತ್ ಡಿಗ್ರಿ ಕಾಲೇಜ್​​ನ ಪ್ರಿನ್ಸಿಪಾಲ್ ಕೇಸ್ ದಾಖಲಿಸಿದ್ರು. ಇದಾದ 13 ವರ್ಷ ಆದ್ಮೇಲೆ ಪ್ರಕರಣದಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ವಿಚಾರಣೆ ವೇಳೆ ಪ್ರಿನ್ಸಿಪಲ್ ಸಾವನ್ನಪ್ಪಿದ್ರು. ಇದಿಗ ವಿಚಾರಣೆ ಮುಗಿದು ಶಾಸಕರಾಗಿರೋ ಪ್ರತಾಪ್​ಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

-masthmagaa.com

Contact Us for Advertisement

Leave a Reply