ಉತ್ತರ ಪ್ರದೇಶದಲ್ಲಿ ಶೇ.40ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರು ಕಣಕ್ಕೆ: ಪ್ರಿಯಾಂಕ

masthmagaa.com:

ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರೋ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯನ್ನ ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ಪ್ರಯತ್ನಗಳನ್ನ ನಡೆಸ್ತಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಒಟ್ಟು ಕ್ಷೇತ್ರಗಳ ಪೈಕಿ 40 ಪರ್ಸೆಂಟ್​​ನಷ್ಟು ಕ್ಷೇತ್ರಗಳಲ್ಲಿ ಮಹಿಳೆಯರನ್ನೇ ಕಣಕ್ಕಿಳಿಸೋದಾಗಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಇದೇ ವೇಳೆ ಮಾಧ್ಯಮದವರು ನೀವೇನಾದ್ರೂ ಯುಪಿ ಎಲೆಕ್ಷನ್​ಗೆ ರಾಯ್​ಬರೇಲಿ ಅಥವಾ ಅಮೇಠಿಯಿಂದ ನಿಲ್ತೀರಾ ಅಂತ ಕೇಳಿದ್ದಾರೆ. ಇದಕ್ಕುತ್ತರಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ‘ಒಂದಲ್ಲಾ ಒಂದು ದಿನ ಸ್ಪರ್ಧಿಸಲೇಬೇಕಾಗುತ್ತೆ. ಆದ್ರೂ ಇದುವರೆಗೆ ಅದರ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಸಮಯ ಬಂದಾಗ ನೋಡಣ’ ಎಂದಿದ್ದಾರೆ.

-masthmagaa.com

Contact Us for Advertisement

Leave a Reply