ಪಾಕ್ ಬೆಂಬಲಿಸಿದ ಹೆಂಡ್ತಿ, ಅತ್ತೆ ವಿರುದ್ಧವೇ ಪತಿ ದೂರು!

masthmagaa.com:

ನನ್ ಹೆಂಡ್ತಿ ಮತ್ತು ಅತ್ತೆ ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕ್ ಗೆದ್ದಿದ್ದಕ್ಕೆ ಸಂಭ್ರಮಿಸಿದ್ದಾರೆ ಅಂತ ಕೇಸ್ ದಾಖಲಿಸಿದ್ದಾರೆ. ಉತ್ತರ ಪ್ರದೇಶದ ರಾಂಪುರದ ಇಶಾನ್ ಮಿಯಾ ದೂರು ನಿಡಿರೋ ವ್ಯಕ್ತಿ. ಪತ್ನಿ ರಬಿಯಾ ಶಂಸಿ ಮತ್ತು ಆಕೆಯ ಕುಟುಂಬಸ್ಥರು ಪಾಕ್ ಗೆದ್ದಿದ್ದಕ್ಕೆ ಪಟಾಕಿ ಸಿಡಿಸಿದ್ದಾರೆ. ವಾಟ್ಸಾಪ್​ನಲ್ಲಿ ಸ್ಟೇಟಸ್ ಹಾಕ್ಕೊಂಡಿದ್ದಾರೆ ಅಂತ ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಂದಹಾಗೆ ಈ ಗಂಡ ಹೆಂಡತಿ ಇಬ್ಬರು ಸಪರೇಟ್ ಆಗಿ ವಾಸಿಸ್ತಿದ್ರು. ಗಂಡನ ಮೇಲೆ ಪತ್ನಿ ರಬಿಯಾ ವರದಕ್ಷಿಣೆ ಕೇಸ್ ಕೂಡ ಹಾಕಿದ್ರು ಅಂತ ಕೂಡ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply