ಮಥುರಾ ರೈಲು ಪ್ಲಾಟ್‌ಫಾರ್ಮ್‌ಗೆ ನುಗ್ಗಲು ಕಾರಣವೇನು ಗೊತ್ತಾ?

masthmagaa.com:

ಉತ್ತರ ಪ್ರದೇಶದ ಮಥುರಾದಲ್ಲಿ ರೈಲೊಂದು ಪ್ಲಾಟ್‌ಫಾರ್ಮ್ ನುಗ್ಗಿದ ಘಟನೆಗೆ ಈಗ ರೈಲು ನಿರ್ವಾಹಕನ ನಿರ್ಲಕ್ಷ್ಯ ಕಾರಣ ಅನ್ನೋದು ಗೊತ್ತಾಗಿದೆ. ಮಥುರಾ ನಿಲ್ದಾಣಕ್ಕೆ ರೈಲು ತಲುಪಿದ ಬಳಿಕ ಲೋಕೋ ಪೈಲಟ್ ತನ್ನ ಕರ್ತವ್ಯ ಮುಗಿಸಿ ಕ್ಯಾಬ್‌ನಿಂದ ಹೊರಟಿದ್ದಾರೆ. ಬಳಿಕ ಕ್ಯಾಬ್ ಒಳಗೆ ಪ್ರವೇಶಿಸಿದ ರೈಲ್ವೆ ಸಿಬ್ಬಂದಿ ಸಚಿನ್‌ ಅನ್ನೋರು ತಮ್ಮ ಬ್ಯಾಗನ್ನ ಎಂಜಿನ್ ಥ್ರೋಟಲ್ ಮೇಲೆ ಇರಿಸಿ, ಮೊಬೈಲ್ ಫೋನ್‌ನಲ್ಲಿ ಏನನ್ನೋ ನೋಡಲು ಆರಂಭಿಸಿದ್ದಾನೆ. ಈ ವೇಳೆ ರೈಲು ಇದ್ದಕಿದ್ದಂತೆ ಪ್ಲಾಟ್‌ಫಾರ್ಮ್‌ ಮೇಲೆ ಹತ್ತಿದೆ. ಇನ್ನು ಸಿಬ್ಬಂದಿ ಫೋನ್‌ನಲ್ಲಿ ಮಗ್ನನಾಗಿರುವುದು ರೈಲಿನ ಒಳಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇತ್ತ ರೈಲಿನ ಎಂಜಿನ್ ಸ್ವಿಚ್ ಆನ್ ಮಾಡಿ ಹಾಗೆಯೇ ಬಿಟ್ಟು ತೆರಳಿದ್ದಾರೆ ಅಂತ ಲೋಕೋ ಪೈಲಟ್ ವಿರುದ್ಧ ಸಚಿನ್ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply