UP ಲಾಠಿಚಾರ್ಜ್: ಕ್ಯಾಂಡಲ್ ತಂದವರು ತಿಂದರು ಲಾಠಿಯಏಟು!

masthmagaa.com:
ಉತ್ತರ ಪ್ರದೇಶದ ಲಕ್ನೋದಲ್ಲಿ ಕ್ಯಾಂಡಲ್ ಮಾರ್ಚ್​​ ವೇಳೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ. 2019ರಲ್ಲಿ 69 ಸಾವಿರ ಸಹಾಯಕ ಶಿಕ್ಷಕರ ಆಯ್ಕೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ನೂರಾರು ಮಂದಿ ಒಟ್ಟುಗೂಡಿ ಲಕ್ನೋದಿಂದ ಸಿಎಂ ನಿವಾಸದವರೆಗೆ ಕ್ಯಾಂಡಲ್ ಮಾರ್ಚ್​ ಹಮ್ಮಿಕೊಂಡಿದ್ರು. ಆದ್ರೆ ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿಚಾರ್ಜ್​ ಮಾಡಿ, ಪ್ರತಿಭಟನಕಾರರನ್ನು ಅಟ್ಟಾಡಿಸಿದ್ದಾರೆ.
-masthmagaa.com

Contact Us for Advertisement

Leave a Reply