ಉತ್ತರ ಪ್ರದೇಶ ಜನಸಂಖ್ಯಾ ನೀತಿಗೆ ವಿಹೆಚ್​ಪಿ ವಿರೋಧ!

masthmagaa.com:

ಜನಸಂಖ್ಯಾ ದಿನವಾದ ನಿನ್ನೆ ಉತ್ತರ ಪ್ರದೇಶದಲ್ಲಿ 2021-30ರ ದಶಕದ ಜನಸಂಖ್ಯಾ ನೀತಿಯನ್ನು ಜಾರಿಗೊಳಿಸಲಾಗಿದೆ. ಆದ್ರೆ ಇದಕ್ಕೆ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿದೆ. ಜನಸಂಖ್ಯಾ ನಿಯಂತ್ರಣಕ್ಕೆ ನಮ್ಮ ಬೆಂಬಲ ಇದೆ. ಆದ್ರೆ ಹೊಸ ನೀತಿಯಲ್ಲಿ ಒಂದು ಮಕ್ಕಳ ಪಾಲಿಸಿ ಬಗ್ಗೆ ಉಲ್ಲೇಖಿಸಲಾಗಿದೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎರಡು ಮಕ್ಕಳ ನೀತಿ ಜನಸಂಖ್ಯಾ ನಿಯಂತ್ರಣದತ್ತ ಕರೆದೊಯ್ಯುತ್ತೆ. ಆದ್ರೆ ಒಂದು ಮಗುವಿನ ನೀತಿಯಿಂದ ಸಮಾಜದಲ್ಲಿ ನಕರಾತ್ಮಕ ಪರಿಣಾಮ ಉಂಟಾಗುತ್ತೆ ಅಂತ ಹೇಳಿದೆ. ಜೊತೆಗೆ ಚೀನಾದಲ್ಲಿ ಒನ್​ ಚೈಲ್ಡ್ ಪಾಲಿಸಿಯಿಂದಾದ ತೊಂದ್ರೆಗಳನ್ನು ಕೂಡ ಉಲ್ಲೇಖಿಸಿದೆ. ಕೆಲವೊಂದು ಸಮುದಾಯ ಸರ್ಕಾರದ ಸೌಲಭ್ಯದ ಆಸೆಗೆ ಬೀಳದೇ ಹೆಚ್ಚು ಮಕ್ಕಳನ್ನು ಹೊಂದಬಹುದು. ಇದ್ರಿಂದ ಸಮಾಜದ ಸಮುದಾಯಗಳ ನಡುವೆ ನಿಯಂತ್ರಣ ತಪ್ಪೋಗುತ್ತೆ ಅಂತ ಹೇಳಿದೆ. ಅಂದಹಾಗೆ ಇತ್ತೀಚೆಗೆ ಉತ್ತರ ಪ್ರದೇಶ ಸ್ಟೇಟ್ ಲಾ ಕಮಿಷನ್ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡು ಸಿದ್ಧಪಡಿಸಿದ್ದು, ಅದ್ರಲ್ಲಿ 2 ಮಕ್ಕಳ ನೀತಿಗೆ ಪ್ರೋತ್ಸಾಹ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಆದ್ರೆ ನಿನ್ನೆ ಸಿಎಂ ಯೋಗಿ ಸರ್ಕಾರ ಘೋಷಿಸಿದ ಹೊಸ ನೀತಿಯ ಪ್ರಕಾರ ಒಂದು ಮಕ್ಕಳನ್ನು ಹೊಂದುವ ನೀತಿಗೆ ಉತ್ತೇಜಿಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಹಾರ ಸಿಎಂ ನಿತೀಶ್ ಕುಮಾರ್, ಪ್ರತಿಯೊಂದು ರಾಜ್ಯವೂ ತನಗೆ ಅಗತ್ಯವಾದ ಕಾನೂನುಗಳನ್ನು ತರಲು ಸ್ವತಂತ್ರವಾಗಿವೆ. ಆದ್ರೆ ಜನಸಂಖ್ಯೆ ನಿಯಂತ್ರಣ ಯಾವುದೇ ಕಾನೂನಿನಿಂದ ತಡೆಯಕ್ಕೆ ಅಗಲ್ಲ. ಅದಕ್ಕೆ ಮೊದಲು ಹೆಣ್ಮಕ್ಕಳನ್ನು ಸುಶಿಕ್ಷಿತನ್ನಾಗಿ ಮಾಡಿದ್ರೆ ಜನಸಂಖ್ಯಾ ದರ ತನ್ನಿಂತಾನೇ ಕಡಿಮೆಯಾಗುತ್ತೆ ಎಂದಿದ್ದಾರೆ. ನಮ್ಮ ರಾಜ್ಯದ ಗೃಹಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply