ವೈದ್ಯರ ಎಡವಟ್ಟು.. ಹೊಟ್ಟೆಯೊಳಗೆ ಬಟ್ಟೆ ಬಿಟ್ಟರು! ಈಗ ಏನಾಗಿದೆ?

masthmagaa.com:

ಉತ್ತರ ಪ್ರದೇಶದ ಶಹಜಹಾನ್​​ಪುರದ ಸರ್ಕಾರಿ ಮೆಡಿಕಲ್ ಕಾಲೇಜ್​ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಜನವರಿ 6ರಂದು ಮಹಿಳೆಯೊಬ್ಬರಿಗೆ ಸಿಸೇರಿಯನ್ ಆಪರೇಷನ್ ಮಾಡಿದ್ದ ವೈದ್ಯರು ಹೊಟ್ಟೆಯಲ್ಲೇ ಬಟ್ಟೆ ಬಿಟ್ಟಿದ್ದಾರೆ ಅನ್ನೋದು ಆರೋಪ. ಇದೀಗ ಗಂಭೀರ ಸ್ಥಿತಿಗೆ ತಲುಪಿರೋ ಮಹಿಳೆ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಲ್ಲಿ ವೆಂಟಿಲೇಟರ್​​ನಲ್ಲಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್​​ ಮೂವರು ಸದಸ್ಯರ ತನಿಖಾ ತಂಡ ರಚಿಸಿ, ಆದಷ್ಟು ಬೇಗ ಘಟನೆ ಸಂಬಂಧ ವರದಿ ನೀಡುವಂತೆ ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿಯೂ ಪ್ರಿನ್ಸಿಪಾಲ್ ಭರವಸೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply