ಉಪೇಂದ್ರ – ಹರಿಪ್ರಿಯಾ ಅಭಿನಯದ ಲಗಾಮ್ ಚಿತ್ರ ಶೂಟಿಂಗ್ ಜೂನ್ 28 ಕ್ಕೆ ಆರಂಭ!!

masthmagaa.com: ಕೆ. ಮಾದೇಶ್ ನಿರ್ದೇಶನದ ಲಗಾಮ್ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದು, ಜೂನ್ 28 ರಿಂದ ಶೂಟಿಂಗ್ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಉಪೇಂದ್ರ ಜೊತೆ ಹರಿಪ್ರಿಯಾ ನಟಿಸುತ್ತಿದ್ದಾರೆ.

ಶೂಟಿಂಗ್ ನಡೆಸಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಚಿತ್ರೀಕರಣ ಆರಂಭಿಸಲು ತಂಡ ಸಿದ್ಧವಾಗಿದೆ.  ಏಪ್ರಿಲ್ 26 ರಿಂದ ಶೂಟಿಂಗ್ ಆರಂಭಿಸಲು ಯೋಜಿಸಲಾಗಿತ್ತು, ಆದರೆ ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಶೂಟಿಂಗ್ ಮುಂದೂಡಲಾಗಿತ್ತು.

ನಾವು ಬೆಂಗಳೂರಿನಲ್ಲಿ ಶೂಟಿಂಗ್ ಪ್ರಾರಂಭಿಸಲು ಯೋಜಿಸಿದ್ದೇವೆ, ಜೂನ್ 28 ರಿಂದ ಶೂಟಿಂಗ್ ಆರಂಭಿಸಲು ನಾವು ಬಯಸಿದ್ದೇವೆ. ಸರ್ಕಾರವು ರೂಪಿಸಿರುವ ಪ್ರೋಟೋಕಾಲ್ಗಳ ಮೂಲಕ ಹೋಗಲು ನಾವು ಸಿದ್ಧರಿದ್ದೇವೆ, ಎಂದು ನಿರ್ದೇಶಕ ಕೆ.ಮಾದೇಶ್ ತಿಳಿಸಿದ್ದಾರೆ.

masthmagaa.com

Contact Us for Advertisement

Leave a Reply