ಅಮೆರಿಕಕ್ಕೂ ಅಕ್ರಮವಾಗಿ ಜನ ಕಳುಹಿಸ್ತಿದೆ ಪಾಕಿಸ್ತಾನ!

masthmagaa.com:

ಪಾಕಿಸ್ತಾನ ಬರೀ ಭಾರತಕ್ಕೆ ಮಾತ್ರ ತಮ್ಮವರನ್ನು ಅಕ್ರಮವಾಗಿ ಕಳುಹಿಸ್ತಿಲ್ಲ.. ಬದಲಾಗಿ ಅಮೆರಿಕಗೂ ಕಾನೂನು ಬಾಹಿರವಾಗಿ ಜನರನ್ನು ಕಾನೂನು ಬಾಹಿರವಾಗಿ ಕಳುಹಿಸ್ತಿದೆ. ಪಾಕಿಸ್ತಾನದ ಕುಖ್ಯಾತ ಹ್ಯೂಮನ್ ಟ್ರಾಫಿಕರ್ ಆಬಿದ್ ಅಲಿ ಖಾನ್​ ತಲೆಗೆ ಅಮೆರಿಕ ಎರಡೆರಡು ಬಹುಮಾನ ಘೋಷಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಸ್ಟೇಟ್​ ಡಿಪಾರ್ಟ್​​ಮೆಂಟ್ ವಕ್ತಾರ ನೆಡ್​ ಪ್ರೈಸ್​, ಪಾಕಿಸ್ತಾನದಿಂದ ಕೆಲಸ ಮಾಡೋ ಆಬಿದ್ ಅಲಿ ಖಾನ್​ ಪಾಕಿಸ್ತಾನ, ನೈರುತ್ಯ ಏಷ್ಯಾ ಮತ್ತು ಗಲ್ಫ್​ ದೇಶಗಳಿಂದ ಕಾನೂನು ಬಾಹಿರವಾಗಿ ಜನರನ್ನು ಅಮೆರಿಕಕ್ಕೆ ಕಳುಹಿಸ್ತಿದ್ದಾನೆ. ದುಡ್ಡು ಪಡೆದು ದಾಖಲೆಯೇ ಇಲ್ಲದೇ ಅಮೆರಿಕಗೆ ಅಪಾರ ಪ್ರಮಾಣದಲ್ಲಿ ಜನ ಬರುವಂತೆ ಮಾಡಿದ್ದಾನೆ. ಈತನ ಬಂಧನಕ್ಕೆ ಸಹಕರಿಸಿದ್ರೆ, ಅಥವಾ ಬಂಧನಕ್ಕೆ ಸಹಾಯವಾಗುವ ಮಾಹಿತಿ ನೀಡಿದ್ರೆ 7.4 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತೆ. ಅದೇ ರೀತಿ ಆತನ ಹಣಕಾಸು ನೆಟ್ವರ್ಕ್​​ ಬಗ್ಗೆ ಮಾಹಿತಿ ನೀಡಿದ್ರೂ ಅದಕ್ಕೂ 7.4 ಕೋಟಿ ರೂಪಾಯಿ ಬಹುಮಾನ ಕೊಡ್ತೀವಿ ಅಂತ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply