ಕ್ಷಿಪಣಿ ಪರೀಕ್ಷೆಯಲ್ಲಿ ಅಪ್ಪ, ಅಜ್ಜನನ್ನ ಮೀರಿಸಿದ ಕಿಮ್ ಜಾಂಗ್ ಉನ್!

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ದೇಶವನ್ನ ಒಂದು ದೈತ್ಯ ಅಣ್ವಸ್ತ್ರ ಶಕ್ತಿಯನ್ನಾಗಿ ರೂಪಿಸ್ತಿದಾರೆ. ನಿಮ್ಮ ಗಮನಕ್ಕಿರಲಿ, ಅಣ್ವಸ್ತ್ರ ಹೊಂದಿರೋ ವಿಶ್ವದ 9 ದೇಶಗಳ ಪೈಕಿ ಉತ್ತರ ಕೊರಿಯಾ ಕೂಡ ಒಂದು. ಅಲ್ಲಿನ ಜನಕ್ಕೆ ತಿನ್ನೋಕೆ ಅನ್ನ ಇಲ್ಲದಿದ್ರೂ ಪರ್ವಾಗಿಲ್ಲ, ಔಷಧ ಇಲ್ಲ ಅಂದ್ರೂ ಪರ್ವಾಗಿಲ್ಲ ಅಣ್ವಸ್ತ್ರಗಳು ಮಾತ್ರ ಬೇಕು.
ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸಂಗ್ ಕಾಲದಲ್ಲಿ 15 ಖಂಡಾಂತರ ಕ್ಷಿಪಣಿ ಪ್ರಯೋಗ ನಡೆಸಲಾಗಿತ್ತು. ನಂತರ ಕಿಮ್ ಜಾಂಗ್ ಇಲ್ ಕಾಲದಲ್ಲಿ 16 ಕ್ಷಿಪಣಿ ಪರೀಕ್ಷೆ, ಎರಡು ಅಣು ಪರೀಕ್ಷೆ ನಡೆಸಲಾಗಿತ್ತು. ಆದ್ರೆ ಮೂರನೇ ತಲೆಮಾರಿನ ಮಹಾನುಭಾವ ಕಿಮ್ ಜಾಂಗ್ ಉನ್ ಕಾಲದಲ್ಲಿ ಎಲ್ಲ ದಾಖಲೆ ಮೀರಿ 91 ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಅಷ್ಟೇ ಅಲ್ಲದೆ ಚಿತ್ರ ವಿಚಿತ್ರ ಆಧುನಿಕ ಶಸ್ತ್ರಾಸ್ತ್ರಗಳ ಪರೀಕ್ಷೆ ಕೂಡ ನಡೆಸಲಾಗಿದೆ.

-masthmagaa.com:

Contact Us for Advertisement

Leave a Reply