ಇರಾಕ್, ಸಿರಿಯಾ ಗಡಿಯಲ್ಲಿ ಅಮೆರಿಕ ಏರ್​ಸ್ಟ್ರೈಕ್​​..!

masthmagaa.com:

ಇರಾಕ್ ಮತ್ತು ಸಿರಿಯಾ ಗಡಿಯಲ್ಲಿ ಇರಾನ್ ಬೆಂಬಲಿತ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ಏರ್​ಸ್ಟ್ರೈಕ್ ನಡೆಸಿದೆ. ದಾಳಿಯಲ್ಲಿ ಸಿರಿಯಾ ಕಡೆ ಇರಾನ್ ಬೆಂಬಲಿತ ಐವರು ಬಂಡುಕೋರರು ಪ್ರಾಣ ಕಳ್ಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದಾಳಿ ಬಗ್ಗೆ ಅಮೆರಿಕದ ಪೆಂಟಗಾನ್ ಕೂಡ ಮಾಹಿತಿ ನೀಡಿದೆ. ಸಿರಿಯಾದಲ್ಲಿ 2 ಮತ್ತು ಇರಾಕ್​ನಲ್ಲಿ 1 ಶಸ್ತ್ರಾಸ್ತ್ರ ಸಂಗ್ರಹಿಸೋ ಸ್ಥಳಗಳನ್ನು ಗುರಿಯಾಗಿಸಿರೋದಾಗಿ ತನ್ನ ಸ್ಟೇಟ್ಮೆಂಟ್​​ನಲ್ಲಿ ಹೇಳಿದೆ. ಜೋ ಬೈಡೆನ್ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಎರಡನೇ ಏರ್​ಸ್ಟ್ರೈಕ್ ಇದಾಗಿದೆ. ಮಾನವರಹಿತ ವೈಮಾನಿಕ ವಾಹನದ ಮೂಲದ ಇರಾಕ್​​ನಲ್ಲಿರೋ ಅಮೆರಿಕ ಸೇನೆಯ ಮೇಲೆ ದಾಳಿ ನಡೆಸಲು ಈ ನೆಲೆಗಳನ್ನು ಉಗ್ರರು ಬಳಸಿಕೊಳ್ತಿದ್ರು ಅಂತ ಕೂಡ ಪೆಂಟಗಾನ್ ಮಾಹಿತಿ ನೀಡಿದೆ. ಈ ನಡುವೆ ತನ್ನ ಪರಮಾಣು ಘಟಕಗಳ ಯಾವುದೇ ಮಾಹಿತಿ ಮತ್ತು ಚಿತ್ರವನ್ನು International Atomic Energy Agencyಗೆ ನೀಡೋದಿಲ್ಲ ಅಂತ ಇರಾನ್ ಹೇಳಿದೆ. ಈ ಹಿಂದೆ ಇರಾನ್ ಜೊತೆಗೆ ಅಮೆರಿಕ ಮತ್ತು ಇತರೆ 6 ದೇಶಗಳು ಪರಮಾಣು ಒಪ್ಪಂದ ಮಾಡ್ಕೊಂಡಿದ್ವು. ಅದ್ರಲ್ಲಿ ಇರಾನ್ ಅಭಿವೃದ್ಧಿ ಕಾರ್ಯಗಳಿಗಾಗಿ ಮಾತ್ರವೇ ಪರಮಾಣು ಬಳಸಬೇಕು. ಶಸ್ತ್ರಾಸ್ತ್ರಕ್ಕೆ ಬಳಸಬಾರದು ಅಂತ ಹೇಳಲಾಗಿತ್ತು. ನಂತರದಲ್ಲಿ 2018ರಲ್ಲಿ ಟ್ರಂಪ್ ಈ ಒಪ್ಪಂದವನ್ನು ತೆಗೆದು ಹಾಕಿದ್ರು. ಇನ್ನು ಈ ಒಪ್ಪಂದವಾಗಿದ್ದಾಗ International Atomic Energy Agency ಜೊತೆಗೂ ಒಂದು ಒಪ್ಪಂದವಾಗಿತ್ತು. ಅದರಂತೆ ಇರಾನ್ ಪರಮಾಣು ಘಟಕಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ, ನಿಗಾ ಇಡಲಾಗುತ್ತಿತ್ತು. ಆದ್ರೆ ಈಗ ಈ ಒಪ್ಪಂದದ ಅವಧಿ ಮುಗಿದಿದ್ದು, ಇನ್ಮುಂದೆ ನಾವು ನಮ್ಮ ಪರಮಾಣು ಘಟಕದ ಫೋಟೋ, ದಾಖಲೆಗಳನ್ನು ನೀಡಲ್ಲ ಅಂತ ಇರಾನ್ ಹೇಳಿದೆ.

-masthmagaa.com

Contact Us for Advertisement

Leave a Reply