ಗರ್ಭಿಣಿಯರು ಕೊರೋನಾ ಲಸಿಕೆ ಹಾಕಿಸಿಕೊಳ್ಳಬಹುದಾ..?

masthmagaa.com:

ಗರ್ಭಿಣಿ ಮಹಿಳೆಯರು ಕೊರೋನಾ ಲಸಿಕೆ ಪಡೆಯಬಹುದಾ..? ಈ ಪ್ರಶ್ನೆಗೆ ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಶನ್ ಸಂಸ್ಥೆ ಉತ್ತರ ಕೊಟ್ಟಿದೆ. ಗರ್ಭವತಿ ಮಹಿಳೆಯರು ಕೂಡ ಲಸಿಕೆಯನ್ನು ಹಾಕಿಸಿಕೊಳ್ಳಬಹದು.. ಅದ್ರಿಂದ ಏನೂ ತೊಂದ್ರೆಯಾಗಲ್ಲ ಅಂತ ಸ್ಪಷ್ಟನೆ ನೀಡಿದೆ. 35 ಸಾವಿರ ಮಹಿಳೆಯರು 9 ತಿಂಗಳ ಗರ್ಭವತಿಯಾಗಿರುವಾಗಲೇ ಮಾಡೆರ್ನಾ ಅಥವಾ ಫೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ 35 ಸಾವಿರ ಮಂದಿಯ ದಾಖಲೆ ಪರಿಶೀಲಿಸಿದಾಗ ಅಕಾಲಿಕವಾಗಿ ಮಗು ಜನಿಸೋದು, ಗರ್ಭಪಾತವಾಗೋದು ಅಥವಾ ಬೇರೆ ಯಾವುದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿಲ್ಲ.. ಲಸಿಕೆ ಹಾಕಿದಾಗ ಬೇರೆಯವರು ಯಾವ ರೀತಿಯ ಸೈಡ್ ಎಫೆಕ್ಟ್ ಅಂದ್ರೆ ಜ್ವರ, ಮೈ ಕೈ ನೋವು ಅನುಭವಿಸಿದ್ದಾರೋ ಅದೇ ರೀತಿ ಗರ್ಭವತಿ ಮಹಿಳೆಯರಿಗೂ ಆಗಿದೆ. ಅದ್ರಲ್ಲೂ 3900 ಮಂದಿ ಗರ್ಭಿಣಿಯರನ್ನು ತುಂಬಾ ಡೀಟೇಲಾಗಿ ಪರಿಶೀಲಿಸಿದ್ದು, ಅವರಲ್ಲಿ 800 ಮಂದಿ ತಮ್ಮ ಪ್ರೆಗ್ನೆನ್ಸಿಯನ್ನು ಕಂಪ್ಲೀಟ್ ಕೂಡ ಮಾಡಿದ್ದಾರೆ ಅಂತ ಸಂಸ್ಥೆ ತಿಳಿಸಿದೆ. ಜೊತೆಗೆ ಲಸಿಕೆಯ ಮಾನವ ಹಂತದ ಪ್ರಯೋಗ ನಡೆಯುವಅಗ ಗರ್ಭಿಣಿಯರನ್ನು ಒಳಗೊಂಡಿರಲಿಲ್ಲ.ಹೀಗಾಗಿ ಜನರಿಗೂ ಇನ್ನೂ ಏನಾದ್ರೂ ಅನುಮಾನ ಇದ್ರೆ ನಿಮ್ಮ ವೈದ್ಯರ ಬಳಿ ಸಲಹೆ ಪಡೆದುಕೊಳ್ಳಬಹುದು ಅಂತ ಸ್ಪಷ್ಟಪಡಿಸಿದೆ.

-masthmagaa.com

Contact Us for Advertisement

Leave a Reply