ಪಾಕಿಸ್ತಾನಕ್ಕೆ ಹಲವು ದೇಶಗಳಿಂದ ಘೋರ ಅಪಮಾನ!

masthmagaa.com:

ಪಾಕಿಸ್ತಾನಕ್ಕೆ ಘೋರ ಮುಖಭಂಗ ಆಗಿದೆ. ಅಮೆರಿಕ, ಯುರೋಪಿನ ದೇಶಗಳು ಪಾಕಿಗೆ ಅವಮಾನ ಮಾಡಿವೆ. ಅಮೆರಿಕ ಯುರೋಪು ಬಿಡಿ..! ಚಡ್ಡಿ ದೋಸ್ತು ಚೀನಾ ಹಾಗೂ ಸಣ್ಣ ದೇಶಗಳಾದ ನೇಪಾಳ, ಶ್ರೀಲಂಕಾಗಳೂ ಪಾಕಿಸ್ತಾನಕ್ಕೆ ಅಯ್ಯೋ ಅನಿಸುವಂತೆ ಮಾಡಿವೆ. ಏನಾಗಿದೆ ಅಂದ್ರೆ, ಭಾರತದ ವ್ಯಾಕ್ಸಿನ್ ಡಿಪ್ಲೋಮಸಿ ನೋಡಿ ಪಾಕಿಸ್ತಾನಕ್ಕೆ ನಾವು ಯಾವ್ದಾದ್ರೂ ಒಂದ್ ಡಿಪ್ಲೋಮಸಿ ಮಾಡ್ಬೇಕಲಾ ಅನ್ಸಿದೆ. ಆದ್ರೆ ವಿದೇಶಗಳಿಗೆ ಗಿಫ್ಟ್ ಅಂತಾ ಕಳಿಸೋದು ಏನನ್ನ? ಹೇರಳವಾಗಿರೋ ಕತ್ತೆಗಳನ್ನ ಚೀನಾಗೆ ಆಲ್ರೆಡಿ ಕಳಿಸ್ತಾ ಇದೀವಿ. ಅದು ಬಿಟ್ಟು ಬೇರೆ ಏನ್ ಕೊಡಣ ಅಂತಾ ಯೋಚ್ನೆ ಮಾಡ್ತಿದ್ದಾಗ ಇಮ್ರಾನ್ ಖಾನ್ಗೆ ದೇಶದಲ್ಲಿ ವಿಪರೀತ ಬೆಳೆಯುವ ಮಾವಿನ ಹಣ್ಣುಗಳು ನೆನಪಾಗಿವೆ. ಸರಿ ಒಂದ್ ಕೆಲಸ ಮಾಡಣ. ವಿಶ್ವದ ೩೨ ದೇಶಗಳ ಮುಖ್ಯಸ್ಥರಿಗೆ ‘ಫ್ರಮ್ ಪಾಕಿಸ್ತಾನ್ ವಿಥ್ ಲವ್’ ಅಂತಾ ಮ್ಯಾಂಗೋ ಬಾಕ್ಸ್ ಕಳಿಸಿಕೊಡಣ ಅಂತಾ ಪ್ಲಾನ್ ಮಾಡಿದ್ದಾರೆ.

ಪಾಕಿಸ್ತಾನದ ಫಾರಿನ್ ಆಫೀಸ್ ಪ್ರಕಾರ, ಮೊನ್ನೆ ಮೊನ್ನೆ ಜಗತ್ತಿನ ೩೨ ದೇಶಗಳಿಗೆ ಪಾಕಿಸ್ತಾನದ ಖ್ಯಾತ ಚೌನ್ಸಾ ತಳಿಯ ಮ್ಯಾಂಗೋ ಬಾಕ್ಸ್ ಗಳನ್ನ ಕಳಿಸಿಕೊಡಲಾಗಿತ್ತು. ಆದ್ರೆ ಆ ಬಾಕ್ಸು ಅಮೆರಿಕ ಅಧ್ಯಕ್ಷ ಬೈಡೆನ್ ಅವರ ವೈಟ್ ಹೌಸ್ ಗೇಟನ್ನೂ ದಾಟಿಲ್ಲ. ಹಾಗೇ ವಾಪಾಸ್ ಕಳಿಸಿಕೊಟ್ಟಿದ್ದಾರೆ. ಪಾಕಿಸ್ತಾನಕ್ಕೆ ನಾನು ನಿನ್ನ ಕುಚಿಕು, ಜೀವ ಹೋದ್ರೂ ನಿನನ್ ಬಿಡಲ್ಲ ಅಂತಾ ನಂಬಿಸಿರೋ ಚೀನಾ ಕೂಡ ಇಮ್ರಾನ್ ಹೃದಯ ತುಂಬಿ ಕಳಿಸಿದ ಮ್ಯಾಂಗೋ ಬಾಕ್ಸ್ ರಿಸೀವ್ ಮಾಡಿಕೊಳ್ಳೋಕೆ ನಿರಾಕರಿಸಿದೆ. ಇಷ್ಟು ಮಾತ್ರವಲ್ಲ ಕೆನಡಾ, ನೇಪಾಳ, ಶ್ರೀಲಂಕಾಗಳು ಕೂಡಾ ಸ್ಸಾರಿ ನಮಗೆ ನಿಮ್ಮ ಮ್ಯಾಂಗೋ ಬೇಡ. ನೋ ಥ್ಯಾಂಕ್ಸ್ ಅಂತಾ ಹೇಳಿವೆ. ಅಟ್ ಲೀಸ್ಟ್ ತಿನ್ನದಿದ್ರೂ ಪರವಾಗಿಲ್ಲ. ತಗೊಂಡು., ಸರಿಬಿಡಿ ಅಂಥಾ ಕಳಿಸಬೋದಿತ್ತು. ಅಷ್ಟೂ ಕರ್ಟೆಸಿ ತೋರದೆ ನಮಗೆ ಬೆಡ ವಾಪಾಸ್ ತಗೊಂಡೋಗಿ ಅಂತಾ ಹೇಳಿದ್ದಾರೆ. ಕೊರೋನ ಪ್ಯಾಂಡೆಮಿಕ್ ನೆಪ ಕೊಟ್ಟು ಪಾಕಿಸ್ತಾನದ ಮ್ಯಾಂಗೋ ಬಾಕ್ಸ್ಗಳನ್ನ ರಿಜೆಕ್ಟ್ ಮಾಡಿವೆ ಈ ದೇಶಗಳು.

ಇರಾನ್, ಗಲ್ಫ್ ರಾಷ್ಟ್ರಗಳು, ಟರ್ಕಿ, ಯುಕೆ, ಅಫ್ಘಾನಿಸ್ತಾನ್, ಬಾಂಗ್ಲಾದೇಶ, ರಷ್ಯಾಗಳಿಗೂ ಮ್ಯಾಂಗೋ ಬಾಕ್ಸ್ ಕಳಿಸಿದ್ದಾರೆ. ಅಲ್ಲಿ ಏನಾಗಿದೆ ಅನ್ನೋದು ಇನ್ನೂ ಸ್ಪಷ್ಟ ಇಲ್ಲ. ವಿಶೇಷ ಅಂದ್ರೆ ಇತ್ತೀಚೆಗೆ ಫ್ರಾನ್ಸ್ ಮತ್ತು ಅದರ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರಾನ್ ವಿರುದ್ಧ ಪಾಕಿಸ್ತಾನ ಬಹಳ ರೋಷಾಗ್ನಿ ಹೊರಹಾಕಿತ್ತು. ಆದ್ರೆ ಅವರಿಗೂ ಈಗ ಮ್ಯಾಂಗೋ ಬಾಕ್ಸ್ ಕಳಿಸಿದ್ದಾರಂತೆ.

ಪಾಕಿಸ್ತಾನ ಭಾರತಕ್ಕೂ ಮ್ಯಾಂಗೋ ಕಳಿಸುವ ರೂಢಿ ಇಟ್ಟಕೊಂಡಿದೆ. ೨೦೧೫ರಲ್ಲಿ ಅಂದಿನ ಪ್ರಧಾನಿ ನವಾಜ್ ಶರೀಫ್.., ಪ್ರಧಾನಿ ನರೇಂದ್ರ ಮೋದಿ, ಅಂದಿನ ಅಧ್ಯಕ್ಷ ಪ್ರಣಬ್ ಮುಖರ್ಜಿ, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಗೆ ಮಾವಿನ ಹಣ್ಣಿನ ಬಾಕ್ಸ್ ಗಳನ್ನ ಕಳಿಸಿಕೊಟ್ಟಿದ್ರು.

ಅಂದಾಹಾಗೆ, ಮಾವಿನ ಹಣ್ಣುಗಳನ್ನ ಕಿಂಗ್ ಆಫ್ ಫ್ರೂಟ್ಸ್ ಅಂತ ಕರೀತಾರೆ. ಭಾರತ ಉಪಖಂಡದಲ್ಲೇ ಮೊದಲು ಮಾವಿನ ಹಣ್ಣುಗಳು ಸೃಷ್ಟಿಯಾದವು ಅಂತ ಹೇಳಲಾಗುತ್ತೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನ ಮ್ಯಾಂಗಿಫೆರಾ ಇಂಡಿಕಾ ಅಂತ ಕರಿತಾರೆ. ಭಾರತ-ಪಾಕಿಸ್ತಾನ ಎರಡಕ್ಕೂ ಮಾವಿನ ಹಣ್ಣು ರಾಷ್ಟ್ರೀಯ ಫಲ. ನ್ಯಾಶನಲ್ ಫ್ರೂಟ್. ಭಾರತವಂತೂ ವಿಶ್ವದ ಅತಿದೊಡ್ಡ ಮ್ಯಾಂಗೋ ಉತ್ಪಾದಕ ದೇಶ. ನಮ್ಮಲ್ಲಿ ೧೨೦೦ಕ್ಕೂ ಅಧಿಕ ವೆರೈಟಿ ಮ್ಯಾಂಗೋ ಬೆಳೆಯಲಾಗುತ್ತೆ. ಪಾಕಿಸ್ತಾನದಲ್ಲೂ ಮ್ಯಾಂಗೋ ಒಂದು ಪ್ರಮುಖ ಬೆಳೆ. ಅಲ್ಲೂ ಸುಮಾರು ೯೦೦ ವೆರೈಟಿ ಮ್ಯಾಂಗೋ ಬೆಳಿತಾರೆ.

-masthmagaa.com

Contact Us for Advertisement

Leave a Reply