ಕೋವ್ಯಾಕ್ಸಿನ್, ಸ್ಪುಟ್ನಿಕ್ ವಿ ಲಸಿಕೆ ಹಾಕಿಸಿಕೊಂಡ ವಿದ್ಯಾರ್ಥಿಗಳಿಗೆ ಟೆನ್ಶನ್!

masthmagaa.com:

ಲಸಿಕೆಯ ವಿಚಾರ ಈಗ ವಿದ್ಯಾರ್ಥಿಗಳಲ್ಲಿ ಹೊಸ ಗೊಂದಲಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ಶಿಕ್ಷಣ ಪಡೆಯಬೇಕೆಂದಿರೋ ವಿದ್ಯಾರ್ಥಿಗಳಿಗೆ ಹೊಸ ತಲೆ ನೋವು ಸೃಷ್ಟಿಸಿವೆ ಅಮೆರಿಕದ ಯೂನಿವರ್ಸಿಟಿಗಳು. ಯಾಕಂದ್ರೆ ಭಾರತ್ ಬಯೋಟೆಕ್​​​ನ ಕೋವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹಾಕಿಸಿಕೊಂಡಿರೋರು ಅಮೆರಿಕಗೆ ಬಂದ ಬಳಿಕ ಮತ್ತೊಮ್ಮೆ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ವಿವಿಗಳು ಸೂಚಿಸಿವೆ. ಮಾರ್ಚ್​​ನಿಂದ ಈವರೆಗೆ ಸುಮಾರು 400 ವಿವಿಗಳು ಈ ರೀತಿ ಆದೇಶಿಸಿವೆ. ಅಂದಹಾಗೆ ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗೆ ಅಮೆರಿಕದಲ್ಲೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಅದೇ ರೀತಿ ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸಿ ಯೂಸ್ ಲಸಿಕೆಗಳ ಪಟ್ಟಿಯಲ್ಲೂ ಸ್ಥಾನ ಸಿಕ್ಕಿಲ್ಲ. ಅಂದಹಾಗೆ ವಿಶ್ವಸಂಸ್ಥೆಯ ಎಮರ್ಜೆನ್ಸಿ ಯೂಸ್ ವ್ಯಾಕ್ಸಿನ್​​​​​ ಪಟ್ಟಿಯಲ್ಲಿ ಫೈಜರ್, ಮಾಡೆರ್ನಾ, ಜಾನ್ಸನ್​​ & ಜಾನ್ಸನ್, ಕೋವಿಶೀಲ್ಡ್​​, ಸಿನೋವ್ಯಾಕ್ ಸೇರಿದಂತೆ ಒಟ್ಟು 8 ಲಸಿಕೆಗಳು ಸ್ಥಾನ ಪಡೆದಿವೆ. ಹೀಗಾಗಿ ಅಪ್ರೂವ್ ಆಗಿರೋ ಲಸಿಕೆಗಳಲ್ಲೇ ಒಂದನ್ನು ಹಾಕಿಸಿಕೊಳ್ಳಬೇಕು ಅಂತಿವೆ ಯೂನಿವರ್ಸಿಟಿಗಳು.. ಇದು ವಿದ್ಯಾರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಇನ್ನು ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಭಾರತದ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಅನುಮತಿ ಕೋರಿದ್ದು, ಅದಕ್ಕೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇಡೀ ವಿಶ್ವದಲ್ಲೇ ಲಸಿಕೆಯ ತಂತ್ರಜ್ಞಾನ ಹಂಚಿಕೊಳ್ಳುತ್ತಿರೋ ದೇಶ ಅಂದ್ರೆ ಅದು ರಷ್ಯಾ ಮಾತ್ರ.. ಈಗಾಗಲೇ 66 ದೇಶಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆ ಮಾರಾಟವಾಗ್ತಿದೆ ಅಂತ ಹೇಳಿದ್ದಾರೆ. ಇನ್ನು ಜಿ7 ದೇಶಗಳ ಶೃಂಗಸಭೆಯಲ್ಲಿ ಮಾತನಾಡಿದ ಬೋರಿಸ್ ಜಾನ್ಸನ್​​​, 2022ರ ಒಳಗಾಗಿ ಇಡೀ ವಿಶ್ವದಲ್ಲಿ ಎಲ್ಲರಿಗೂ ಲಸಿಕೆ ಹಾಕಿಯಾಗಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply