ಭಾರತಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಶಾಕ್ ಕೊಟ್ಟ ಅಮೆರಿಕ!

masthmagaa.com:

ಧಾರ್ಮಿಕ ಸ್ವಾತಂತ್ರ್ಯದ ವಿಚಾರವಾಗಿ ಅಮೆರಿಕ ಮತ್ತೆ ಭಾರತಕ್ಕೆ ಶಾಕ್ ಕೊಟ್ಟಿದೆ. ಅಮೆರಿಕದ United States Commission on International Religious Freedom ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ನೆಗೆಟಿವ್ ರಿಪೋರ್ಟ್ ನೀಡಿದೆ. ಜೊತೆಗೆ ಭಾರತವನ್ನು ಕಂಟ್ರಿ ಆಫ್ ಪರ್ಟಿಕುಲರ್ ಕನ್ಸರ್ನ್​​ ಪಟ್ಟಿಯಲ್ಲಿ ಸೇರಿಸುವಂತೆ ಶಿಫಾರಸು ಮಾಡಿದೆ. ಯಾವ ದೇಶದಲ್ಲಿ 1998ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಉಲ್ಲಂಘನೆಯಾಗ್ತಿದೆಯೋ ಅವುಗಳನ್ನು ಈ ಲಿಸ್ಟ್​ನಲ್ಲಿ ಇಡಲಾಗುತ್ತೆ. ಸದ್ಯ ಚೀನಾ, ಪಾಕಿಸ್ತಾನ, ಬರ್ಮಾ, ಸೌದಿ ಅರೇಬಿಯಾ, ರಷ್ಯಾ, ನಾರ್ಥ್ ಕೊರಿಯಾ ಈ ಪಟ್ಟಿಯಲ್ಲಿವೆ.. ಈ ಹಿಂದೆಯೂ ಈ ಸಂಸ್ಥೆ ಭಾರತವನ್ನು ಈ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿತ್ತು. ಇದೀಗ ಮತ್ತೊಮ್ಮೆ ಶಿಫಾರಸು ಮಾಡಿದೆ. ಜೊತೆಗೆ ತನ್ನ ವರದಿಯಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗ್ತಿರೋದಕ್ಕೆ, ಕಟ್ಟರ್ ಧಾರ್ಮಿಕ ಸಂಘಟನೆಗಳಿಗೆ ಬೆಂಬಲಿಸೋದನ್ನು ಟೀಕಿಸಲಾಗಿದೆ. ಸಿಎಎ ಮತ್ತು ಎನ್​ಆರ್​​ಸಿ ವಿರುದ್ಧ ನಡೆದ ಪ್ರತಿಭಟನೆ ಕುರಿತೂ ಇದ್ರಲ್ಲಿ ಉಲ್ಲೇಖಿಸಲಾಗಿದ್ದು, ಇದ್ರಲ್ಲಿ 50 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ಧಾರೆ. ಈ ವೇಳೆ ಹಿಂದೂ ರಾಷ್ಟ್ರೀಯತೆ ಹೊಂದಿರೋ ಜನ ಧಾರ್ಮಿಕ ಸ್ಥಳಗಳನ್ನು ಟಾರ್ಗೆಟ್ ಮಾಡಿದ್ರು. ಕೆಲವೊಂದು ಸಮುದಾಯದ ಮನೆ, ಅಂಗಡಿಗಳನ್ನು ಹುಡುಕಿ ಹುಡುಕಿ ಧ್ವಂಸಗೊಳಿಸಿದ್ರು. ದೆಹಲಿಯ ಶಹೀನ್​ಭಾಗ್​ನಲ್ಲಿ ನೂರಕ್ಕೂ ಹೆಚ್ಚು ದಿನ ನಡೆದ ಶಾಂತಿಯುತ ಪ್ರತಿಭಟನೆಯನ್ನು ಪೊಲೀಸರು 2020ರ ಮಾರ್ಚ್​ ತಿಂಗಳಲ್ಲಿ ಅಂತ್ಯಗೊಳಿಸಿದ್ರು ಅಂತ ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ಬಿಜೆಪಿ ಸರ್ಕಾರ ಹಿಂದೂ ರಾಷ್ಟ್ರೀಯತೆಯ ನೀತಿಗಳಿಗೆ ಬೆಂಬಲ ನೀಡಿದೆ. ಇದ್ರಿಂದ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ನಿರಂತರವಾಗಿ ಉಲ್ಲಂಘನೆಯಾಗ್ತಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ.. ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಕರ್ನಾಟಕ, ಅಸ್ಸಾಂನಲ್ಲಿ ಧರ್ಮ ಧರ್ಮಗಳ ನಡುವಿನ ಮದುವೆಗೆ ಸಂಬಂಧಿಸಿದಂತೆ ತರಲು ಹೊರಟಿರೋ ಕಾನೂನುಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ. ಈ ಹಿಂದೆ ಈ ರೀತಿ ವರದಿ ನೀಡಿದಾಗ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಇಲಾಖೆ, ನಮ್ಮ ದೇಶದ ನಾಗರಿಕರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂವಿಧಾನದ ರಕ್ಷಣೆ ಇದೆ. ಹೊರಗಿನವರು ಬಂದು ಮಾತನಾಡೋ ಅಗತ್ಯ ಇಲ್ಲ ಅಂತ ಖಾರವಾಗಿ ಉತ್ತರ ಕೊಟ್ಟಿತ್ತು.

-masthmagaa.com

Contact Us for Advertisement

Leave a Reply