ಅಮೆರಿಕದ ಮೇಲೆ ಸೈಬರ್ ಅಟ್ಯಾಕ್​​..! ಯಾರು ಮಾಡಿದ್ದು..?

masthmagaa.com:

ಅಮೆರಿಕದ ಅತಿದೊಡ್ಡ ತೈಲ ಉತ್ಪಾದಕ ಕಂಪನಿ ಕೊಲೋನಿಯಲ್ ಪೈಪ್​​ಲೈನ್ ಮೇಲೆ ಶುಕ್ರವಾರ ಸೈಬರ್ ದಾಳಿ ನಡೆದಿದೆ. ಹೀಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಈಗ ತೈಲ ಪೂರೈಕೆ ಪೈಪ್​ಲೈನ್ ಬದಲಾಗಿ ರಸ್ತೆ ಮಾರ್ಗದಲ್ಲಿ ನಡೆಯಲಿದೆ. ಈ ಬಗ್ಗೆ ತನಿಖೆ ಆರಂಭಿಸಿರೋ ಫೆಡರಲ್ ಬ್ಯೂರೋ ಇನ್ವೆಸ್ಟಿಗೇಷನ್ ತಂಡ ಈ ಬಗ್ಗೆ ನಮಗೆ ಶುಕ್ರವಾರವೇ ಮಾಹಿತಿ ಬಂದಿತ್ತು. ಈ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಅಂತ ಹೇಳಿದೆ. ಸುಮಾರು 100 ಜಿಬಿ ಡೇಟಾವನ್ನು ವಶಕ್ಕೆ ಪಡೆದಿರೋ ಸೈಬರ್​ ದುಷ್ಟರು, ಕೆಲ ಕಂಪ್ಯೂಟರ್, ಸರ್ವರ್ ಡೇಟಾಗಳನ್ನು ಕೂಡ ಲಾಕ್ ಮಾಡ್ಬಿಟ್ಟಿದ್ದಾರೆ. ಜೊತೆಗೆ ನಿರಂತರವಾಗಿ ದುಡ್ಡಿಗಾಗಿ ಬೇಡಿಕೆ ಇಡ್ತಿದ್ದಾರೆ. ಒಂದ್ವೇಳೆ ದುಡ್ಡು ಕೊಡದೇ ಇದ್ರೆ, ದಾಖಲೆಗಳನ್ನು ಇಂಟರ್​ನೆಟ್​​ನಲ್ಲಿ ಲೀಕ್ ಮಾಡೋದಾಗಿಯೂ ಬೆದರಿಕೆ ಹಾಕ್ತಿದ್ದಾರೆ. ಅಂದಹಾಗೆ 8850 ಕಿಲೋಮೀಟರ್ ಉದ್ದವಿರೋ ಈ ಕೊಲೋನಿಯಲ್ ಪೈಪ್​​ಲೈನ್ ಮೂಲಕ ಪ್ರತಿದಿನ 25 ಲಕ್ಷ ಬ್ಯಾರಲ್ ತೈಲ ಪೂರೈಕೆಯಾಗುತ್ತೆ. ಇಡೀ ಪೂರ್ವ ತೀರದಲ್ಲಿ ಇದೇ ಕಂಪನಿ ಡೀಸೆಲ್ ಮತ್ತು ಗ್ಯಾಸ್​ ಪೂರೈಕೆ ಮಾಡುತ್ತೆ. ಆದ್ರೆ ಶುಕ್ರವಾರ ಸೈಬರ್ ದಾಳಿ ನಡೆದಿದ್ದು, ಇವತ್ತು ಹಲವೆಡೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

-masthmagaa.com

Contact Us for Advertisement

Leave a Reply