ಭಾರತದಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ: ಸೇನಾ ಸಹಕಾರ ಕುರಿತು ಚರ್ಚೆ

masthmagaa.com:

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವ್ರು ಸಿಂಗಾಪುರ ಪ್ರವಾಸ ಅಂತ್ಯಗೊಳಿಸಿ, ಭಾರತಕ್ಕೆ ಆಗಮಿಸಿದ್ದಾರೆ. ಭಾರತದಲ್ಲಿರೊ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಅವ್ರು ಪೆಂಟಗಾನ್‌ ಮುಖ್ಯಸ್ಥ ಆಸ್ಟಿನ್‌ ಅವ್ರನ್ನ ಸ್ವಾಗತಿಸಿದ್ದಾರೆ. ಭೇಟಿ ಕುರಿತು ಟ್ವೀಟ್‌ ಮಾಡಿರೊ ಆಸ್ಟಿನ್‌, ʻಉಭಯ ದೇಶಗಳ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನ ಬಲಪಡಿಸುವ ಕುರಿತು ಚರ್ಚೆ ಮಾಡಲು ಪ್ರಮುಖ ನಾಯಕರನ್ನ ಭೇಟಿ ಮಾಡೋಕೆ ನಾನು ಭಾರತಕ್ಕೆ ಆಗಮಿಸಿದ್ದೇನೆʼ ಅಂತ ಹೇಳಿದ್ದಾರೆ. ನಿನ್ನೆ ಭಾರತಕ್ಕೆ ಆಗಮಿಸಿರೋ ಆಸ್ಟಿನ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವ್ರನ್ನ ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಆಸ್ಟಿನ್‌ ಅವರ ಭಾರತದ ಭೇಟಿ, ಉಭಯ ದೇಶಗಳ ನಡುವೆ ಹೊಸ ರಕ್ಷಣಾ ಆವಿಷ್ಕಾರಗಳು ಹಾಗೂ ಕೈಗಾರಿಕಾ ಸಹಕಾರದ ಮೇಲೆ ಫೋಕಸ್‌ ಆಗಿದೆ ಎನ್ನಲಾಗಿದೆ. ಅಲ್ದೇ ಅಮೆರಿಕ ಹಾಗೂ ಭಾರತೀಯ ಸೇನಾಪಡೆಗಳ ನಡುವಿನ ಕಾರ್ಯಾಚರಣೆ ಸಹಕಾರವನ್ನ ವಿಸ್ತರಿಸೋಕೆ ಕೂಡ ಈ ಭೇಟಿ ಸಹಕಾರಿಯಾಗಲಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply