ಸೌದಿಗೆ ಬರೋದೇ ಇಲ್ಲ ಅಂತ ಅಲ್ಲ.. ಬರ್ತೀವಿ…: ಅಮೆರಿಕ

masthmagaa.com:

ಇತ್ತೀಚೆಗೆ ಗಲ್ಫ್​ ದೇಶಗಳಿಗೆ ಪ್ರವಾಸ ಕೈಗೊಂಡಿದ್ದ ಅಮೆರಿಕ ಸೆಕ್ರೆಟರಿ ಆಫ್ ಡಿಫೆನ್ಸ್​ ಲಾಯ್ಡ್​ ಆಸ್ಟಿನ್​​​​​ ಸೌದಿ ಅರೇಬಿಯಾಗೆ ಭೇಟಿ ನೀಡಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ, ಇತ್ತೀಚಿನ ಪ್ರವಾಸದಲ್ಲಿ ಕೆಲವೊಂದು ಕಾರಣಗಳಿಂದಾಗಿ ಸೌದಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಈಗಲೂ ಪೆಂಟಗಾನ್ ಮುಖ್ಯಸ್ಥ ಲಾಯ್ಡ್​ ಆಸ್ಟಿನ್ ಸೌದಿಯ ರಕ್ಷಣಾ ಸಚಿವರಾಗಿರೋ ಎಂಬಿಎಸ್ ಅಂದ್ರೆ ಮೊಹ್ಮದ್ ಬಿನ್ ಸಲ್ಮಾನ್​​ರನ್ನು ಭೇಟಿಯಾಗೋ ನಂಬಿಕೆಯಲ್ಲಿದ್ದಾರೆ. ಸೌದಿ ಜೊತೆ ನಮ್ಮ ರಕ್ಷಣಾ ಸಂಬಂಧ ಕೂಡ ಇದೆ. ಹೀಗಾಗಿ ಮತ್ತೊಮ್ಮೆ ಉಭಯನಾಯಕರು ಭೇಟಿಯಾಗಲು ಅವಕಾಶ ಸಿಗುತ್ತೆ ಅಂತ ನಂಬಿದ್ದೇವೆ.. ಭೇಟಿ ಮುಂದೂಡಲಾಗಿದೆಯೇ ಹೊರತು, ಶಾಶ್ವತವಾಗಿ ಕ್ಯಾನ್ಸಲ್ ಮಾಡಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply