‘ಬೆಂಕಿ ಜೊತೆ ಆಟವಾಡ್ತಿದ್ದೀರಿ’: ಅಮೆರಿಕಕ್ಕೆ ಚೀನಾ ಖಡಕ್ ವಾರ್ನಿಂಗ್

masthmagaa.com:

ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಕೆಲ್ಲಿ ಕ್ರಾಫ್ಟ್​​ ಮುಂದಿನ ವಾರ ತೈವಾನ್​​ಗೆ ಪ್ರವಾಸ ಕೈಗೊಳ್ಳಲಿದ್ಧಾರೆ. ಆದ್ರೆ ಈ ಪ್ರವಾಸಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದ್ದು, ಅಮೆರಿಕ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತೆ ಅಂತ ಎಚ್ಚರಿಸಿದೆ. ಹೆಸರಿಗೆ ಪ್ರಜಾಪ್ರಭುತ್ವ ದೇಶವಾಗಿರೋ ತೈವಾನ್ ದಿನನಿತ್ಯವೂ ಚೀನಾ ದಾಳಿಯ ಭೀತಿ ಎದುರಿಸುತ್ತಿದೆ. ಯಾಕಂದ್ರೆ ತೈವಾನ್ ತನ್ನದೇ ಭೂಪ್ರದೇಶ ಅಂತ ಚೀನಾ ಹೇಳಿಕೊಂಡು ಬರ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈವಾನ್​​ನ ರಾಜತಾಂತ್ರಿಕ ಮಾನ್ಯತೆಯನ್ನ ವಿರೋಧಿಸುತ್ತಾ ಬಂದಿದೆ. ಜೊತೆಗೆ ಜಾಗತಿಕ ವೇದಿಕೆಯಿಂದ ತೈವಾನ್​​ ಅನ್ನು ಸಪರೇಟ್ ಆಗೇ ಇಡೋಕೆ ಟ್ರೈ ಮಾಡ್ತಾ ಬಂದಿದೆ. ಚೀನಾ ಜೊತೆಗಿನ ವ್ಯಾಪಾರ, ಭದ್ರತೆ, ಮಾನವಹಕ್ಕು ವಿಚಾರದಲ್ಲಿ ಸಂಘರ್ಷದ ಬಳಿಕ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ತೈವಾನ್ ರಾಜಧಾನಿ ತೈಪೆಗೆ ಹಲವು ಹಿರಿಯ ಅಧಿಕಾರಿಗಳನ್ನ ಕಳುಹಿಸಿದ್ದಾರೆ.

-masthmagaaa.com

Contact Us for Advertisement

Leave a Reply