ಅಮೆರಿಕದಲ್ಲಿ ಮೇ 14ರಂದು `Day of Action’! ಏನಿದು?

masthmagaa.com:

ಅಮೆರಿಕದಲ್ಲಿ ಅಬಾರ್ಷನ್‌ ವಿಷಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗ ಅಲ್ಲಿನ ಹಲವು ಸಂಸ್ಥೆಗಳು ಒಟ್ಟಾಗಿ ಮೇ 14ರಂದು ಗರ್ಭಪಾತ ಹಕ್ಕನ್ನ ಬೆಂಬಲಿಸಿ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದನ್ನ `Day of Action’ ಅಂತ ಕರೆಯಲಾಗ್ತಿದ್ದು ಅಮೆರಿಕದ ಹಲವು ನಗರಗಳಲ್ಲಿ ನೂರಾರು ಕಾರ್ಯಕ್ರಮಗಳ ಮೂಲಕ ಪ್ರತಿಭಟಿಸೋಕೆ ಅಣಿಯಾಗಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿರೋ ಪ್ರತಿಭಟನಾಕಾರರೊಬ್ರು, ಈ ಸಮ್ಮರ್‌ ಅಮೆರಿಕದ ಮಹಿಳೆಯರಿಗೆ ಆಕ್ರೋಶ ವ್ಯಕ್ತಪಡಿಸುವ ಬೇಸಿಗೆಯಾಗಿರಲಿದೆ ಅಂತ ಹೇಳಿದ್ರೆ ಉತ್ಪ್ರೇಕ್ಷೆ ಆಗಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply