ಚೀನಾ ಮಿಸೈಲ್‌ಗಳಲ್ಲಿ ಇಂಧನ ಇಲ್ಲ, ನೀರಿದೆ: ಅಮೆರಿಕ

masthmagaa.com:

ಚೀನಾ ಮಿಸೈಲ್‌ಗಳಲ್ಲಿ ಇಂಧನ ಇಲ್ಲ. ಬದಲಾಗಿ ನೀರು ತುಂಬಲಾಗಿದೆ ಅಂತ ಅಮೆರಿಕ ಗುಪ್ತಚರ ಇಲಾಖೆಗಳು ಮಾಹಿತಿ ನೀಡಿವೆ. ಹೀಗಂತ ಅಮೆರಿಕದ ಬ್ಲೂಮ್‌ಬರ್ಗ್‌ ಸಂಸ್ಥೆ ರಿಪೋರ್ಟ್‌ ಮಾಡಿದೆ. ಅಂದ್ಹಾಗೆ ಚೀನಾ ಇತ್ತೀಚೆಗೆ ತನ್ನ ಹಲವು ಅಧಿಕಾರಿಗಳನ್ನ ವಜಾ ಮಾಡಿತ್ತು. ಅದ್ರಲ್ಲೂ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ರಾಕೆಟ್‌ ಫೋರ್ಸ್‌ನಲ್ಲಿದ್ದ ಅಧಿಕಾರಿಗಳನ್ನ ರಿಮೂವ್‌ ಮಾಡಿತ್ತು. ಇದಕ್ಕೆ ಕಾರಣ ಹೇಳಿರೋ ಅಮೆರಿಕ, ಚೀನಾ ಸೆಕ್ಯೂರಟಿಯಲ್ಲಿ ಭಾರಿ ಭ್ರಷ್ಟಾಚಾರ ಕಂಡುಬಂದಿದೆ. ಅದ್ರಲ್ಲೂ ಚೀನಾ ಮಿಸೈಲ್‌ ಪ್ರೋಗ್ರಾಮ್‌ ಅಧಿಕಾರಿಗಳು ಮಿಸೈಲ್‌ಗಳಿಗೆ ಇಂಧನ ಬದಲು ನೀರು ತುಂಬಿದ್ದಾರೆ. ಅಲ್ಲದೆ ಮಿಸೈಲ್‌ ತಯಾರಿಕೆಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನ ಬಳಸಿದ್ದಾರೆ. ಇದ್ರಿಂದ್ಲೇ ಅವ್ರನ್ನ ವಜಾ ಮಾಡಲಾಗಿದೆ ಅಂತ ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಈ ವರದಿಯ ಸತ್ಯಾಸತ್ಯಯೆ ಎಷ್ಟಿದೆ ಅಂತ ಗೊತ್ತಿಲ್ಲ. ಆದ್ರೆ ಇದೇನಾದ್ರು ನಿಜಾ ಅಂತಂದ್ರೆ, ಚೀನಾ ಈವರೆಗೆ ಡಿಫೆನ್ಸ್‌ ಮೇಲೆ ಇನ್ವೆಸ್ಟ್‌ ಮಾಡಿರೋದೆಲ್ಲ, ಹೊಳೇಲಿ ಹುಣಿಸೇಹಣ್ಣು ತೇದ ಹಾಗಾಗುತ್ತೆ. ಗಡಿ ತುಂಬಾ ಕ್ಯಾತೆ ತೆಗೆಯೋ ಚೀನಾದ ಕಾನ್ಫಿಡೆನ್ಸ್‌ಗೆ ಸರಿಯಾದ ಏಟು ಬಿದ್ದಂಗಾಗುತ್ತೆ. ಯಾಕಂದ್ರೆ ಚೀನಾದ ಮಿಲಿಟರಿ ವೆಚ್ಚ, ಅದ್ರ ಎಕಾನಮಿಗಿಂತ ಜಾಸ್ತಿ ಬೆಳೆದು ನಿಂತಿದೆ.

-masthmagaa.com

Contact Us for Advertisement

Leave a Reply