masthmagaa.com:

ಭಾರತದ ವೈರಿ ದೇಶಗಳಾದ ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಒಟ್ಟು 10 ದೇಶಗಳನ್ನ ಅಮೆರಿಕ ‘ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ’ ಪಟ್ಟಿಗೆ ಸೇರಿಸಿದೆ. ಇದರಲ್ಲಿ ಉತ್ತರ ಕೊರಿಯಾ, ಸೌದಿ ಅರೇಬಿಯಾ, ಮ್ಯಾನ್ಮಾರ್​, ಇರಾನ್, ನೈಜೀರಿಯಾ, ಎರಿಟ್ರಿಯಾ, ತಜಕಿಸ್ತಾನ ಮತ್ತು ತುರ್ಕ್​ಮೆನಿಸ್ತಾನ ಕೂಡ ಇದೆ. ಧಾರ್ಮಿಕ ಸ್ವಾತಂತ್ರ್ಯದ ವ್ಯವಸ್ಥಿತ ಮತ್ತು ಅತಿಯಾದ ಉಲ್ಲಂಘನೆ ಹಿನ್ನೆಲೆ ಈ ದೇಶಗಳನ್ನ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಅಡಿಯಲ್ಲಿ ನಿರ್ದಿಷ್ಟ ಕಾಳಜಿಯ ದೇಶಗಳೆಂದು ಅಮೆರಿಕ ಗುರುತಿಸಿದೆ ಅಂತ ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ. ಇದರ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯದ ತೀವ್ರ ಉಲ್ಲಂಘನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅಥವಾ ಸಹಿಸಿಕೊಳ್ಳುತ್ತಾರೆ ಎಂಬ ಕಾರಣದಿಂದ ರಷ್ಯಾ, ಕ್ಯೂಬಾ, ಕೊಮೊರೋಸ್ ಮತ್ತು ನಿಕರಗಾವ ದೇಶಗಳನ್ನ ‘ಸ್ಪೆಷಲ್ ವಾಚ್ ಲಿಸ್ಟ್​’ನಲ್ಲಿ ಇಡಲಾಗಿದೆ.

ಇನ್ನು ಅಲ್​-ಖೈದಾ, ತಾಲಿಬಾನ್, ಬೋಕೋ ಹರಾಮ್, ಹೌತೀಸ್, ಐಸಿಸ್, ಐಸಿಸ್-ಗ್ರೇಟರ್ ಸಹರಾ, ಐಸಿಸ್-ಪಶ್ಚಿಮ ಆಫ್ರಿಕಾ ಮುಂತಾದ ಉಗ್ರ ಸಂಘಟನೆಗಳನ್ನ ಫ್ರಾಂಕ್ ಆರ್. ವುಲ್ಫ್ ಇಂಟರ್​ನ್ಯಾಷನಲ್​ ರಿಲಿಜಿಯಸ್ ಫ್ರೀಡಂ ಆಕ್ಟ್-2016ರ ಅಡಿಯಲ್ಲಿ ನಿರ್ದಿಷ್ಟ ಕಾಳಜಿಯ ಘಟಕಗಳಾಗಿ ಗುರುತಿಸಲಾಗಿದೆ ಅಂತ ಪಾಂಪಿಯೋ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply