ಅಮೆರಿಕ-ಚೀನಾ ನಡುವೆ ಯುದ್ಧದ ಸಾಧ್ಯತೆ: ಟ್ರಂಪ್ ಎಚ್ಚರಿಕೆ

masthmagaa.com:

ಅಮೆರಿಕ ಮತ್ತು ಚೀನಾ ನಡುವೆ ಯುದ್ಧವಾಗೋ ಸಾಧ್ಯತೆ ಇದೆ ಅಂತ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಸಿದ್ದಾರೆ. ಚುನಾವಣೆಯಲ್ಲಿ ಮೋಸ ನಡೆದಿದ್ದರಿಂದ ಬಂದ ಜೋ ಬೈಡೆನ್ ಸರ್ಕಾರ ಭ್ರಷ್ಟ ಮತ್ತು ದುರ್ಬಲವಾಗಿದೆ. ಹೀಗಾಗಿ ಚೀನಾ ಈಗ ಅಮೆರಿಕವನ್ನು ಗೌರವಿಸುತ್ತಿಲ್ಲ. ಇದ್ರಿಂದ ಚೀನಾ ಮತ್ತು ಅಮೆರಿಕದ ನಡುವೆ ಯುದ್ಧ ನಡೆದ್ರೂ ನಡೆಯಬಹುದು ಅಂತ ಹೇಳಿದ್ದಾರೆ. ಡೆಮಾಕ್ರಟಿಕ್ ಪಕ್ಷದವರು ನಮ್ಮ ದೇಶವನ್ನೇ ನಾಶ ಮಾಡ್ತಿದ್ದಾರೆ. ಇವರು ಕೇವಲ ಬೇರೆ ಪಕ್ಷದವರನ್ನ ದೂರಿಕೊಂಡು, ಅಪರಾಧದ ಚಟುವಟಿಕೆಗಳಲ್ಲಿ ಭಾಗಿಯಾಗ್ತಿದ್ದಾರೆ. ನಮ್ಮ ದೇಶ ತುಂಬಾ ದೊಡ್ಡ ಅಪಾಯದಲ್ಲಿದೆ. ನಾವು ತುಂಬಾ ವೇಗವಾಗಿ ಮುನ್ನುಗ್ಗೋ ಅನಿವಾರ್ಯತೆ ಇದೆ ಅಂತ ಟ್ರಂಪ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply