Havana Syndrome ಭೇದಿಸಲು ಅಮೆರಿಕ ಸರ್ಕಸ್!

masthmagaa.com:

ಅಮೆರಿಕ ಎಷ್ಟೇ ಮುಂದುವರಿದ್ರೂ ತನ್ನ ಗುಪ್ತಚರ ಅಧಿಕಾರಿಗಳು, ರಾಜತಾಂತ್ರಿಕರಿಗೆ ಕಾಡುತ್ತಿರೋ ಹವಾನಾ ಸಿಂಡ್ರೋಮ್​​ನ ರಹಸ್ಯವನ್ನ ಬೇಧಿಸಲು ಇದುವರೆಗೆ ಸಾಧ್ಯವಾಗಲಿಲ್ಲ. ಈ ಮಿಸ್ಟರಿಯನ್ನ ಬಗೆಹರಿಸೋ ಮತ್ತೊಂದು ಪ್ರಯತ್ನವಾಗಿ ಹವಾನಾ ಸಿಂಡ್ರೋಮ್​ನ ತನಿಖೆ ನಡೆಸಲು ಜೋನಾಥನ್​ ಮೂರೆ ಅನ್ನೋರನ್ನ ನೇಮಿಸಲಾಗಿದೆ ಅಂತ ಅಮೆರಿಕದ ಸೆಕ್ರೆಟರಿ ಆಫ್​ ಸ್ಟೇಟ್​ ಆಂಟನಿ ಬ್ಲಿಂಕನ್​ ಹೇಳಿದ್ದಾರೆ. ಅಂದ್ಹಾಗೆ ಹವಾನಾ ಸಿಂಡ್ರೋಮ್​ ಅನ್ನೋದು ಒಂದು ರೀತಿಯ ಆರೋಗ್ಯ ಸಮಸ್ಯೆ. ಇದು ಹೆಚ್ಚಾಗಿ ಅಮೆರಿಕದ ಗುಪ್ತಚರ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಮತ್ತು ಅವರ ಕುಟುಂಬಸ್ಥರಿಗೆ ಬರುತ್ತೆ. ಇತ್ತೀಚೆಗೆ ದೆಹಲಿಗೆ ಬಂದು ಹೋಗಿದ್ದ ಸಿಐಎ ಅಧಿಕಾರಿಯೊಬ್ಬರಿಗೆ ಹವಾನಾ ಸಿಂಡ್ರೋಮ್​ನ ಲಕ್ಷಣಗಳು ಕಾಣಿಸಿಕೊಂಡಿತ್ತು. ಇಂಥಾ ಹವಾನಾ ಸಿಂಡ್ರೋಮ್​ ಅನ್ನ ಅಮೆರಿಕ ತನ್ನ ಮೇಲೆ ವಿರೋಧಿಗಳು ಮಾಡ್ತಿರೋ ದಾಳಿ ಅಂತ ಪರಿಗಣಿಸಿದ್ರೆ. ಇನ್ನೂ ಕೆಲವರು ಇದು ಮಾನಸಿಕ ಸಮಸ್ಯೆ ಅಂತಾರೆ. ಹೀಗಾಗಿ ಹವಾನಾ ಸಿಂಡ್ರೋಮ್​ ಅಂದ್ರೆ ನಿಜವಾಗಿಯೂ ಏನು, ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನ ಪತ್ತೆಹಚ್ಚೋ ಕೆಲಸಕ್ಕೆ ಮುಂದಾಗಿದೆ ಬೈಡೆನ್​ ಸರ್ಕಾರ. ಆದ್ರೆ ಇದುವರೆಗೆ ಸಿಗದ ಯಶಸ್ಸು ಈಗ ಸಿಗುತ್ತಾ ಅನ್ನೋದನ್ನ ಕೂಡ ಕಾದು ನೋಡ್ಬೇಕು​. ಅಂದ್ಹಾಗೆ ಹವಾನಾ ಸಿಂಡ್ರೋಮ್ ಅಂದ್ರೆ ಏನು? ಅದು ಬಂದ್ರೆ ಏನೇನು ಸಮಸ್ಯೆ ಆಗುತ್ತೆ? ಅನ್ನೋದನ್ನ ನಾವು ಈ ಹಿಂದೆನೇ ಸಪರೇಟ್​ ವಿಡಿಯೋ ಮಾಡಿ ಹಾಕಿದ್ದೀವಿ. ನೀವದನ್ನ ಚೆಕ್ ಮಾಡ್ಬೋದು. ಅದರ ಲಿಂಕ್​ ಅನ್ನ ಡಿಸ್ಕ್ರಿಪ್ಷನ್​ ಬಾಕ್ಸ್​ನಲ್ಲಿ ಹಾಕ್ತೀವಿ.

-masthmagaa.com

Contact Us for Advertisement

Leave a Reply