ಅಮೆರಿಕದಲ್ಲಿ ವಿಮಾನ ಪತನ! ಮಕ್ಕಳಿದ್ದ ಶಾಲೆ ಜಸ್ಟ್ ಮಿಸ್

masthmagaa.com:

ಅಮೆರಿಕದ ಟೆಕ್ಸಾಸ್’ನಲ್ಲಿ US NAVYಯ ವಿಮಾನವೊಂದು ಪತನವಾಗಿದೆ. ಇಬ್ಬರೂ ಪೈಲಟ್’ಗಳು ಸೇಫಾಗಿ ಎಜೆಕ್ಟ್ ಮಾಡಿ ಹೊರ ಹಾರಿದ್ದಾರೆ. ಆದ್ರೂ ಸಣ್ಣಪುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಟೆಕ್ಸಾಸ್’ನ ಫೋರ್ಟ್ವರ್ಥ್ ಸಮೀಪ ವಸತಿ ಕಟ್ಟಡವೊಂದರ ಸಮೀಪ ಬಂದು ಈ ವಿಮಾನ ನೆಲಕ್ಕೆ ಅಪ್ಪಳಿಸಿದೆ. ಮೂರು ಮನೆಗಳಿಗೆ ಹಾನಿಯಾಗಿದೆ. ಒಂದು ಬ್ಲಾಕ್ ಪಕ್ಕದಲ್ಲೇ ಒಂದು ಮಿಡಲ್ ಸ್ಕೂಲ್ ಇತ್ತು. ಅದೃಷ್ಟವಶಾತ್ ಆ ಶಾಲೆ ಮೇಲೆ ಬಿದ್ದಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಇದು ನಮ್ಮ ನೌಕಾಪಡೆಯ T-45C Goshawk ಜೆಟ್. ಇದನ್ನ ಹೊಸ ಪೈಲಟ್’ಗಳ ತರಬೇತಿಗೆ ಬಳಸಲಾಗ್ತಿತ್ತು. ಸಾಮಾನ್ಯವಾಗಿ ಏರ್ಕ್ರಾಫ್ಟ್ ಕ್ಯಾರಿಯರ್ಗಳಲ್ಲಿ ಇದನ್ನ ಬಳಸಲಾಗ್ತಿತ್ತು. ನಮ್ಮ ಫೋರ್ಟ್ ವರ್ಥ್ ಸೇನಾ ನೆಲೆಯ ಮೂರು ಕಿಲೋಮೀಟರ್ ದೂರದಲ್ಲಿ ಈ ದುರಂತ ನಡೆದಿದೆ ಅಂತ ಅಮೆರಿಕನ್ ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವಿಮಾನ ಪತನಕ್ಕೆ ಕಾರಣ ಏನು ಅನ್ನೊದು ಇನ್ನಷ್ಟೆ ಪತ್ತೆಯಾಗಬೇಕಿದೆ ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply