ಅಫ್ಘನ್ ವಲಸಿಗರನ್ನು ಮಧ್ಯ ಏಷ್ಯಾ ದೇಶಗಳಲ್ಲಿ ಅಡ ಇಡೋಕೆ ಅಮೆರಿಕ ಯತ್ನ: ರಷ್ಯಾ

masthmagaa.com:

ಅಮೆರಿಕ ಅಫ್ಘಾನಿಸ್ತಾನದ ವಲಸಿಗರನ್ನು ಮಧ್ಯ ಏಷ್ಯಾ ದೇಶಗಳಲ್ಲಿ ಅಡ ಇಡೋಕೆ ನೋಡ್ತಿದೆ ಅಂತ ರಷ್ಯಾ ವಿದೇಶಾಂಗ ಸಚಿವ ಸರ್ಜೀ ಲವ್​ರೋವ್ ಆರೋಪಿಸಿದ್ದಾರೆ. ಸದ್ಯ ಹಂಗೇರಿ ಪ್ರವಾಸದಲ್ಲಿರೋ ಲವ್​ರೋವ್​​, ಅಮೆರಿಕ ಅಫ್ಘನ್ ವಲಸಿಗರನ್ನು ಕೆಲ ಮಧ್ಯ ಏಷ್ಯಾ ದೇಶಗಳಿಗೆ ಕಳುಹಿಸಲು ಯತ್ನಿಸ್ತಿದೆ. ಈ ಭಾಗದ ದೇಶಗಳ ಮನವೊಲಿಸಲು ಯತ್ನಿಸ್ತಿದೆ. ಅಫ್ಘನ್ ವಲಸಿಗರು ಕೆಲ ಸಮಯದವರೆಗೆ ಮಾತ್ರವೇ ನಿಮ್ ದೇಶಗಳಲ್ಲಿ ಇರ್ತಾರೆ. ಕೆಲ ತಿಂಗಳ ವಿಷಯ ಅಷ್ಟೆ.. ಯಾಕಂದ್ರೆ ವಲಸಿಗರಿಗೆ ವೀಸಾ ಮಾಡಿಕೊಡಲು ಸಮಯ ಬೇಕು ಅಂತ ಹೇಳ್ತಿದೆ. ಆದ್ರೆ ಈ ವಲಸಿಗ ಅಫ್ಘನ್ನರು ಅಮೆರಿಕ ಸೇನೆ ಪರವಾಗಿಯೇ ಕೆಲಸ ಮಾಡಿದ್ರು ಅಂದ್ಮೇಲೆ ಅವರಿಗೆ ವೀಸಾ ನೀಡಲು ಅಷ್ಟು ಸಮಯ ಯಾಕೆ ಬೇಕು..? ಅಂತ ಪ್ರಶ್ನಿಸಿದ್ದಾರೆ. ಅಂದ್ರೆ ಇನ್​ಡೈರೆಕ್ಟಾಗಿ ಈ ವಲಸಿಗರನ್ನು ಮಧ್ಯ ಏಷ್ಯಾ ದೇಶಗಳಿಗೆ ಸಾಗಹಾಕಿ ಅಮೆರಿಕ ಕೈತೊಳೆದುಕೊಳ್ಳುತ್ತೆ ಅನ್ನೋದು ಇವರ ಆರೋಪ.. ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ವಲಸಿಗರನ್ನು ಸ್ವೀಕರಿಸಲು ನಿರಾಕರಿಸಿದ್ರು. ವಲಸಿಗರ ರೂಪದಲ್ಲಿ ಅಫ್ಘನ್ ಉಗ್ರರು ನಮ್ಮ ದೇಶಕ್ಕೆ ಬರೋದು ಬೇಡ ಅಂತಲೇ ಹೇಳಿದ್ರು.

-masthmagaa.com

Contact Us for Advertisement

Leave a Reply