2001ರ ದಾಳಿಯ ದಾಖಲೆ ಬಿಡುಗಡೆ ಆದೇಶಕ್ಕೆ ಬೈಡೆನ್‌ ಸಹಿ

masthmagaa.com:

ಸೆಪ್ಟೆಂಬರ್ 11ರ ದಾಳಿ ಸಂಬಂಧ ಅಮೆರಿಕ ನಡೆಸಿದ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ 6 ತಿಂಗಳಲ್ಲಿ ಬಹಿರಂಗಗೊಳಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶಿಸಿದ್ದಾರೆ. ಈ ದಾಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಬೇಕು ಅಂತ ಈ ದುರಂತದಲ್ಲಿ ಮಡಿದವರ ಕುಟುಂಬಸ್ಥರು ಒತ್ತಡ ಹೇರುತ್ತಲೇ ಇದ್ದಾರೆ. ಈ ದಾಳಿಯಲ್ಲಿ ಅಮೆರಿಕದ ಮಿತ್ರದೇಶವಾದ ಸೌದಿ ಅರೇಬಿಯಾದ ಪಾತ್ರ ಕೂಡ ಇದೆ ಅನ್ನೋದಕ್ಕೆ ಈ ಗುಪ್ತ ದಾಖಲೆಗಳಲ್ಲಿ ಸಾಕ್ಷ್ಯ ಇದೆ ಅನ್ನೋದು ಅವರ ಆರೋಪ.. ಈ ಬಗ್ಗೆ ಪ್ರತಿಕ್ರಿಯಿಸಿರೋ ಬೈಡೆನ್​​, ಡಿಪಾರ್ಟ್​ಮೆಂಟ್ ಆಫ್ ಜಸ್ಟೀಸ್​​​ ಮತ್ತು ಇತರೆ ಸಂಸ್ಥೆಗಳಿಗೆ ಫೆಡರಲ್ ಬ್ಯೂರೋ ಇನ್ವೆಸ್ಟಿಗೇಷನ್​​ನ ದಾಖಲೆಗಳನ್ನು ಬಹಿರಂಗಪಡಿಸುವಂತೆ ಸೂಚಿಸೋ ಆದೇಶಕ್ಕೆ ಸಹಿ ಹಾಕಿದ್ದೀನಿ. ಅದರಂತೆ ಮುಂದಿನ 6 ತಿಂಗಳಲ್ಲಿ ದಾಖಲೆ ಬರಹಿಂಗವಾಗಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply