ಕ್ಷಿಪಣಿ ಪರೀಕ್ಷೆ ಮಾಡ್ತ ಇದ್ದ ಕಿಮ್‌ಗೆ ವಿಶ್ವಸಂಸ್ಥೆ ಕೊಟ್ಟ ಸಲಹೆ ಏನು?

masthmagaa.com:

ರಷ್ಯಾಗೆ ಮತ್ತೆ ವಾರ್ನಿಂಗ್‌ ಕೊಟ್ಟಿರುವ ಅಮೇರಿಕ, ಒಂದ್ವೇಳೆ ಯುಕ್ರೇನ್‌ ಮೇಲೆ ದಾಳಿ ಮಾಡಿದ್ರೆ “ನಾರ್ಡ್‌ ಸ್ಟ್ರೀಮ್‌ 2” ಇರಲ್ಲ ಅಂತ ಎಚ್ಚರಿಸಿದೆ. ಜೆರ್ಮನ್ ಚಾನ್ಸಲರ್‌ ಓಲಾಫ್‌ ಶೋಲ್ಸ್ ಜೊತೆ ಜಂಟಿ ಸುದ್ಧಿಗೋಷ್ಠಿ ನಡೆಸಿದ ಅಮೇರಿಕ ಅಧ್ಯಕ್ಷ ಜೋ ಬೈಡೆನ್‌ “ರಷ್ಯಾ ಆಕ್ರಮಣ ಮಾಡಿದ್ರೆ, ಮತ್ತೆ ನಾರ್ಡ್‌ ಸ್ಟ್ರೀಮ್‌ ಇರಲ್ಲ. ನಾವು ಅದಕ್ಕೆ ಅಂತ್ಯ ಕಾಣಿಸಬೇಕಾಗುತ್ತೆ” ಅಂತ ಹೇಳಿದರು. ಆದ್ರೆ ಹೇಗೆ ಮಾಡ್ತೀರಿ ಅಂತ ಕೇಳಿದ ಮರುಪ್ರಶ್ನೆಗೆ “ನಾನು ನಿಮಗೆ ಪ್ರಮಾಣ ಮಾಡಿ ಹೇಳ್ತೇನೆ, ನಾವು ಖಂಡಿತ ಮಾಡ್ತೀವಿ” ಅಂತ ಬೈಡೆನ್‌ ಹೇಳಿದ್ರು. ನಾರ್ಡ್‌ ಸ್ಟ್ರೀಮ್‌ ಜರ್ಮನಿಯಿಂದ ರಷ್ಯಾಗೆ ನ್ಯಾಚುರಲ್‌ ಗ್ಯಾಸ್‌ ಪೂರೈಕೆ ಮಾಡುವ ಪೈಪಲೈನ್‌. ಇದೇ ಸಮಯದಲ್ಲಿ ಅಮೇರಿಕ ಮತ್ತು ಜರ್ಮನಿ, ರಷ್ಯಾದ ಆಕ್ರಮಣದ ವಿರುದ್ಧ ಒಗ್ಗಟ್ಟನ್ನು ತೋರಿಸಲಿದ್ದೇವೆ ಅಂತ ಹೇಳಿವೆ. ಆದ್ರೆ ರಷ್ಯಾದೊಂದಿಗೆ ಮುಖ್ಯವಾದ ಗ್ಯಾಸ್‌ ಪೈಪಲೈನ್‌ ಯೋಜನೆ ಮಾಡಿಕೊಂಡಿರುವ ಜರ್ಮನಿ ಅದ್ಹೇಗೆ ಸಾಥ್‌ ಕೊಡುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ.

-masthmagaa.com

Contact Us for Advertisement

Leave a Reply