ಅದಾನಿ ಗ್ರೂಪ್‌ಗೆ ಮತ್ತೆ ತಲೆನೋವು! ತನಿಖೆ ವಿಸ್ತರಿಸಿದ ಅಮೆರಿಕ!

masthmagaa.com:

ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ಕಾಟದಿಂದ ತಪ್ಪಿಸ್ಕೊಂಡ್ವಿ ಅಂತ ನಿಟ್ಟುಸಿರು ಬಿಟ್ಟ ಅದಾನಿ ಗ್ರೂಪ್‌ಗೆ ಇದೀಗ ಪುನಃ ತಲೆನೋವು ಶುರುವಾಗಿದೆ. ಅದಾನಿ ಗ್ರೂಪ್‌ ವಿರುದ್ಧ ತನಿಖೆಯನ್ನ ಇನ್ನಷ್ಟು ವಿಸ್ತರಿಸೋಕೆ ಹಿಂಡನ್‌ಬರ್ಗ್‌ ರಿಪೋರ್ಟ್‌ ಅಮೆರಿಕದ ಕಾನೂನು ಸಚಿವಾಲಯವನ್ನ ಪುನಃ ಪ್ರೇರೇಪಿಸಿದೆ. ಇದೀಗ ಅಮೆರಿಕದ ವಕೀಲರು ಅದಾನಿ ಗ್ರೂಪ್‌ ಮೇಲೆ ಹದ್ದಿನಕಣ್ಣಿಟ್ಟು, ಕಂಪನಿ ಯವ್ದಾದ್ರು ಲಂಚದಲ್ಲಿ ತೊಡಗಿಕೊಂಡಿರಬಹುದಾ ಅಂತ ವ್ಯಾಪಕ ತನಿಖೆ ನಡೆಸ್ತಿದ್ದಾರೆ. ಅಲ್ದೇ ಈ ವಿಚಾರವಾಗಿ ಅದಾನಿ ಗ್ರೂಪ್‌ನ ಸಂಸ್ಥಾಪಕ…ಬಿಲಿಯನೇರ್‌ ಗೌತಮ್‌ ಅದಾನಿಯ ನಡವಳಿಕೆ ಮೇಲೂ ಫೋಕಸ್‌ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಜೊತೆಗೆ ಅದಾನಿ ಅವ್ರ ಎನರ್ಜಿ ಪ್ರಾಜೆಕ್ಟ್‌ಗೆ ಸ್ವಲ್ಪ ಸಹಾಯವಾಗ್ಲಿ ಅಂತ ಅದಾನಿ ಕಂಪನಿ ಅಥ್ವಾ ಕಂಪನಿ ಲಿಂಕ್‌ ಇರೋರು ಭಾರತೀಯ ಅಧಿಕಾರಿಗಳಿಗೆ ಹಣದಾಸೆ ತೋರಿಸ್ತಿದ್ದಾರಾ… ಲಂಚ ನೀಡ್ತಿದ್ದಾರಾ ಅಂತ ಕೆದಕೋ ಕೆಲಸವನ್ನ ಅಮೆರಿಕದ ತನಿಖಾಧಿಕಾರಿಗಳು ಮಾಡ್ತಿದ್ದಾರೆ. ಅಲ್ದೇ ಭಾರತದ ಅಜುರೆ ಪವರ್‌ ಗ್ಲೋಬಲ್‌ ಅನ್ನೋ ಎನರ್ಜಿ ಕಂಪನಿ ಮೇಲೂ ಅಮೆರಿಕದ ವಕೀಲರು ಕಣ್ಣಾಡಿಸ್ತಿದೆ…ತನಿಖೆ ನಡೆಸ್ತಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಅದಾನಿ ಗ್ರೂಪ್‌, ʻನಮ್ಮ ಅಧ್ಯಕ್ಷರ ವಿರುದ್ಧ ಯಾವ್ದೇ ರೀತಿ ತನಿಖೆ ನಡೀತಿರೋ ಮಾಹಿತಿ ನಮಗೆ ತಿಳಿದಿಲ್ಲ. ನಾವು ಭಾರತ ಮತ್ತು ಇತರೆ ದೇಶಗಳ ಭ್ರಷ್ಟಾಚಾರ ವಿರೋಧಿ ಮತ್ತು ಲಂಚ ವಿರೋಧಿ ಕಾನೂನುಗಳನ್ನ ಸಂಪೂರ್ಣವಾಗಿ ಅನುಸರಿಸ್ತೀವಿ ಅಂತ ಇಮೇಲ್‌ ಮೂಲಕ ಹೇಳಿಕೆ ನೀಡಿದ್ದಾರೆ. ಆದ್ರೆ ಅಜುರೆ ಕಂಪನಿ ಮಾತ್ರ ಅಮೆರಿಕ ವಕೀಲರ ತನಿಖೆ ಬಗ್ಗೆ ಯಾವ್ದೇ ರೀತಿ ಕಮೆಂಟ್‌ ಮಾಡಿಲ್ಲ.

-masthmagaa.com

Contact Us for Advertisement

Leave a Reply