ಅಮೆರಿಕ ದಾಳಿ ಹಿಂದೆ ಸೌದಿ ಕೈವಾಡ! ಅಮೆರಿಕದ ಗುಪ್ತಚರ ಸಂಸ್ಥೆ ವರದಿ

masthmagaa.com:

ಅಮೆರಿಕದ ಗುಪ್ತಚರ ಸಂಸ್ಥೆ ಎಫ್​ಬಿಐ ನಿನ್ನೆ ರಾತ್ರಿ 16 ಪುಟಗಳ ಗುಪ್ತವರದಿಯನ್ನು ಬಹಿರಂಗಪಡಿಸಿದ್ದಾರೆ. ಇವುಗಳು ಅಮೆರಿಕದ ಮೇಲೆ ನಡೆದ ದಾಳಿ ಹಿಂದೆ ಸೌದಿ ಅರೇಬಿಯಾ ಕೈವಾಡ ಇರೋದಕ್ಕೆ ಮತ್ತಷ್ಟು ಬಲ ನೀಡಿವೆ. ಅಪಹರಣಕಾರರು ಅಮೆರಿಕದಲ್ಲಿದ್ದ ಸೌದಿಯ ಒಮರ್ ಬಯೌಮಿ ಜೊತೆ ಲಿಂಕ್ ಹೊಂದಿದ್ರು ಅಂತ ಗೊತ್ತಾಗಿದೆ. ಒಮರ್ ಬಯೌಮಿ ದಾಳಿ ವೇಳೆ ಸ್ಟೂಡೆಂಟ್ ಅಂತ ಹೇಳಿಕೊಂಡು ಅಮೆರಿಕದಲ್ಲಿದ್ದ. ಆದ್ರೆ ನಂತರದಲ್ಲ ಈತ ಸೌದಿ ಗುಪ್ತಚರ ಇಲಾಖೆಗೆ ಸೇರಿದವನು ಅಂತ ಹೇಳಲಾಗಿತ್ತು. ಇದೀಗ ಈತ ಅಹಪರಣಕಾರರೊಂದಿಗೆ ಸಂಬಂಧ ಹೊಂದಿರೋದು ದಾಳಿಯಲ್ಲಿ ಸೌದಿ ಕೈವಾಡ ಇದೆ ಅಂತ ಆರೋಪಿಸುತ್ತಿದ್ದ ದಾಳಿಯ ಸಂತ್ರಸ್ಥರ ಕುಟುಂಬಗಳ ವಾದಕ್ಕೆ ಬಲ ಸಿಕ್ಕಂತಾಗಿದೆ.

-masthmagaa.com

Contact Us for Advertisement

Leave a Reply