ಚೀನಾ ವಿರುದ್ಧ ಭಾರತಕ್ಕೆ ಸಹಾಯ ಮಾಡಲು ಮುಂದಾದ ಅಮೆರಿಕ!

masthmagaa.com:

ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಗ್ನತೆ ಇರುವ ಹಿನ್ನಲೆಯಲ್ಲಿ ಯುದ್ಧ ವಿಮಾನಗಳು ಹಾಗೂ ಆರ್ಟಿಲರಿ ಗಳನ್ನ ಭಾರತದ ಜೊತೆ ಸೇರಿ ಅಭಿವೃದ್ಧಿಪಡಿಸೋಕೆ ಬೇಕಾದ ತಯಾರಿ ನಡೆಸಲಾಗ್ತಿದೆ ಅಂತ ಅಮೆರಿಕ ಹೇಳಿದೆ. ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಕಳೆದ 3 ವರ್ಷಗಳಿಂದ ಸಂಘರ್ಷ ನಡೆಯುತ್ತಿದೆ. ಹೀಗಾಗಿ ಚೀನಾ ಒಡ್ಡುತ್ತಿರೋ ಸವಾಲುಗಳು ಮತ್ತು ಸಮಸ್ಯೆಗಳನ್ನ ಭಾರತ ಸಮರ್ಥವಾಗಿ ಎದುರಿಸಲು ಸಹಕಾರಿಯಾಗ್ಬೇಕು ಅನ್ನೊ ನಿಟ್ಟಿನಲ್ಲಿ ಅಮೆರಿಕ ಈ ಹೆಜ್ಜೆ ಇಟ್ಟಿದೆ ಅಂತ ಪೆಂಟಗಾನ್‌ ಅಧಿಕಾರಿಯೊಬ್ರು ಮಾಹಿತಿ ನೀಡಿದ್ದಾರೆ. ಇನ್ನೊಂದ್‌ ಕಡೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸಕ್ಕೆ ಹೋಗಿ ಬಂದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಸಂಬಂಧ ಮೊದ್ಲಿಗಿಂತಲೂ ಸ್ಟ್ರಾಂಗ್‌ ಆಗಿದೆ ಅಂತ ಅಮೆರಿಕ ಹೇಳಿದೆ. ಕಳೆದ ತಿಂಗಳು ಮೋದಿಯವರು ಅಮೆರಿಕಾಗೆ ಭೇಟಿ ನೀಡಿದ್ದು, ಅತ್ಯಂತ ಮಹತ್ವ ಹಾಗೂ ಯಶಸ್ವಿಯಾಗಿತ್ತು. ಭಾರತದ ಜೊತೆಗಿನ ಸಂಬಂಧ ಎಂದಿಗಿಂತಲೂ ಈಗ ಗಟ್ಟಿಯಾಗಿದೆ. ನಾವು ಹಲವು ಪ್ರಮುಖ ಒಪ್ಪಂದಗಳನ್ನ ಮಾಡಿಕೊಂಡಿದ್ದು, ಅವುಗಳಲ್ಲಿ ಕೆಲವನ್ನ ಕಾರ್ಯಗತಗೊಳಿಸಲಾಗ್ತಿದೆ ಅಂತ ವೈಟ್‌ಹೌಸ್‌ ಪ್ರೆಸ್‌ ಸೆಕ್ರೆಟರಿ ಕರೀನ್‌ ಜೀನ್‌ ಪಿಯರ್‌ ಅವ್ರು ಹೇಳಿದ್ದಾರೆ. ಮತ್ತೊಂದ್‌ ಕಡೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರು ಅಲ್ಲಿನ ಸಂಸತ್ತಿನ ಸದಸ್ಯರಿಗೆ ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡ ಸಂಸದರು ಮೋದಿಯವರನ್ನ ಹಾಡಿ ಹೊಗಳಿದ್ದಾರೆ. ಮೋದಿಯವರ ಭೇಟಿ ವೇಳೆ ಭಾರತದಲ್ಲಿನ ಮಾನವ ಹಕ್ಕುಗಳ ಬಗ್ಗೆ ಚರ್ಚಿಸುವಂತೆ ಬೈಡನ್‌ರನ್ನ ಒತ್ತಾಯಿಸಿದ್ದ 70 ಜನ ಸಂಸದರಲ್ಲಿ ಒಬ್ಬರಾದ ಮ್ಯಾಕ್ಸ್‌ವೆಲ್‌ ಅಲೆಜಾಂಡ್ರಿ ಅವ್ರು ಮೋದಿಯವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ರು ಅಂತ ಹೊಗಳಿದ್ದಾರೆ.

-masthmagaa.com

Contact Us for Advertisement

Leave a Reply