ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆ ಹಿಂದಿತ್ತಾ ಸೋವಿಯತ್ ಒಕ್ಕೂಟ?

masthmagaa.com:
ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಹತ್ಯೆ ಇನ್ನೂ ಕೂಡ ಹಲವು ರಹಸ್ಯಗಳಿಂದ ಕೂಡಿದೆ. ಈ ಘಟನೆ ನಡೆದು ಅರ್ಧ ಶತಮಾನವೇ ಕಳೆದು ಹೋದ್ರೂ ಹಾಗಂತೆ ಹೀಗಂತೆ ಅಂತ ಊಹಾಪೋಹಗಳು ಹರಿದಾಡುತ್ತಲೇ ಇವೆ. ಇದ್ರ ನಡುವೆಯೇ ಅಮೆರಿಕದ ದಿ ನ್ಯಾಷನಲ್ ಆರ್ಕೈವ್​​ ಜಾನ್ ಎಫ್ ಕೆನಡಿ ಹತ್ಯೆಗೆ ಸಂಬಂಧಿಸಿದ 1491 ಫೈಲ್​ಗಳ ದಾಖಲೆಯನ್ನು ಬಹಿರಂಗಪಡಿಸಿದೆ. ಇದ್ರಿಂದ ಆರೋಪಿ ಲೀ ಹಾರ್ವೆ ಒಸ್ವಾಲ್ಡ್​ ಕೆನಡಿ ಹತ್ಯೆಗೂ 2 ತಿಂಗಳ ಹಿಂದೆ ಸೋವಿಯತ್ ಒಕ್ಕೂಟದ ಗುಪ್ತಚರ ಸಂಸ್ಥೆ ಕೆಜಿಬಿಯ ಏಜೆಂಟ್​ನನ್ನು ಭೇಟಿಯಾಗಿದ್ದ ಅನ್ನೋದು ಗೊತ್ತಾಗಿದೆ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಶೀತಲ ಯುದ್ಧದ ಸಮಯದಲ್ಲಿ ಅಂದ್ರೆ 1963ರ ನವೆಂಬರ್ 22ರಂದು ಜಾನ್ ಎಫ್ ಕೆನಡಿ ಹತ್ಯೆ ನಡೆದಿತ್ತು. ಕೆನಡಿ ಹತ್ಯೆಗೆ ಸೋವಿಯತ್ ಒಕ್ಕೂಟ ಪ್ಲಾನ್ ಮಾಡ್ತಿದೆ ಅಂತ ಆಸ್ಟ್ರೇಲಿಯಾದಲ್ಲಿರೋ ಅಮೆರಿಕ ರಾಯಭಾರಿ ಕಚೇರಿಗೆ ಅಜ್ಞಾತ ವ್ಯಕ್ತಿಗಳು ಕರೆ ಮಾಡಿ ಮಾಹಿತಿ ನೀಡಿದ್ರು. ಆದ್ರೆ ಈ ಮಾಹಿತಿಯನ್ನು ಅಮೆರಿಕದ ಸಿಐಎಗೆ ನೀಡಲೇ ಇಲ್ಲ ಅಂತ ಕೂಡ ಈ ಫೈಲ್​​ನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ಕಮ್ಯೂನಿಸ್ಟ್ ಸರ್ಕಾರವಿದ್ದ ಕ್ಯೂಬಾದಲ್ಲೂ ಒಸ್ವಾಲ್ಡ್​​ ಲಿಂಕ್​​ಗಳನ್ನು ಹೊಂದಿದ್ದ ಅಂತ ಕೂಡ ಈ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಅಂದಹಾಗೆ ಈ ಹತ್ಯೆಯ ಬಗ್ಗೆ ಅಮೆರಿಕದ ಜನರಲ್ಲಿ ಇನ್ನೂ ಗೊಂದಲಗಳಿಗೆ.. ಒಸ್ವಾಲ್ಡ್​ ಒಬ್ಬನೇ ಕೆನಡಿಯನ್ನು ಹತ್ಯೆ ಮಾಡಿಲ್ಲ. ಕಮ್ಯೂನಿಸ್ಟ್​ ಸಿಂಪತಿ ಹೊಂದಿದ್ದ ಆತ ಕ್ಯೂಬಾ ಮತ್ತು ರಷ್ಯಾ ಹೆಲ್ಪ್ ತಗೊಂಡು ಕೆನಡಿ ಹತ್ಯೆ ಮಾಡಿದ ಅಂತ ಕೆಲವರು ಹೇಳ್ತಾರೆ. ಇನ್ನು ಕೆಲವರು ಕೆನಡಿ ಕ್ಯೂಬಾ ಮಿಸೈಲ್ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿದ್ದಕ್ಕೆ ಕ್ಯೂಬಾ ವಿರೋಧಿಗಳು ಎಫ್​ಬಿಐ ಅಥವಾ ಇತರೆ ಅಮೆರಿಕದ ಗುಪ್ತಚರ ಸಂಸ್ಥೆಗಳ ಬೆಂಬಲದಿಂದ ಕೆನಡಿ ಹತ್ಯೆಗೆ ಸಂಚು ರೂಪಿಸಿದ್ರು ಅಂತ ಹೇಳ್ತಾರೆ. ಇನ್ನು ಕೆಲವರಂತೂ ರಾಜಕೀಯ ಪಿತೂರಿ ಅಂತಾರೆ..
ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿಯ ಮಗಳು ಕೆರೋಲಿನ್ ಕೆನಡಿಯನ್ನು ಆಸ್ಟ್ರೇಲಿಯಾದಲ್ಲಿ ಅಮೆರಿಕರ ರಾಯಭಾರಿಯಾಗಿ ಜೋ ಬೈಡೆನ್ ನಾಮ ನಿರ್ದೇಶನ ಮಾಡಿದ್ದಾರೆ. ಇವರು 2013ರಿಂದ 2017ರವರೆಗೆ ಬರಾಕ್ ಒಬಾಮಾ ಅವಧಿಯಲ್ಲಿ ಜಪಾನ್ ರಾಯಭಾರಿಯಾಗಿ ಕೆಲಸ ಮಾಡಿದ್ರು. ಈಗ ಸೆನೆಟ್ ಒಪ್ಪಿಗೆ ಪಡೆದ ಬಳಿಕ ಆಸ್ಟ್ರೇಲಿಯಾ ರಾಯಭಾರಿಯಾಗಿ ಕೆಲಸ ಶುರು ಮಾಡಲಿದ್ದಾರೆ.
-masthmagaa.com

Contact Us for Advertisement

Leave a Reply