24 ಮಂದಿ ರಷ್ಯಾ ರಾಜತಾಂತ್ರಿಕರನ್ನು ವಾಪಸ್ ಕಳುಹಿಸಲು ಅಮೆರಿಕ ಸಿದ್ಧತೆ!

masthmagaa.com:

ರಷ್ಯಾದ 24 ಮಂದಿ ರಾಜತಾಂತ್ರಿಕರನ್ನು ದೇಶ ಬಿಟ್ಟು ಹೋಗಿ ಅಂತ ಅಮೆರಿಕ ಸೂಚಿಸಿದೆ. ಹೀಗಂತ ಅಮೆರಿಕದಲ್ಲಿ ರಷ್ಯಾದ ರಾಯಭಾರಿಯಾಗಿರೋ ಅನಟೋಲಿ ಅಂಟಾನೋವ್ ಹೇಳಿದ್ದಾರೆ. ರಷ್ಯಾದ 24 ಮಂದಿಯ ವೀಸಾ ಎಕ್ಸ್​​ಪೈರ್ ಆಗಿದೆ. ಇದೇ ಕಾರಣ ಮುಂದಿಟ್ಟು ಸೆಪ್ಟೆಂಬರ್ 3ರೊಳಗೆ ವಾಪಸ್ ಹೋಗುವಂತೆ ಸೂಚಿಸಲಾಗಿದೆ. ಆದ್ರೆ ಅವರೆಲ್ಲರೂ ಯಾವುದೇ ರೀತಿಯ ರೀಪ್ಲೇಸ್ ಇಲ್ಲದೇ ಹೋಗ್ತಿದ್ದಾರೆ. ಅಂದ್ರೆ ಅವರ ಜಾಗಕ್ಕೆ ಬೇರೆಯವರು ಬರ್ತಿಲ್ಲ. ಯಾಕಂದ್ರೆ ಅಮೆರಿಕ ವೀಸಾ ನೀಡುವ ಪ್ರಕ್ರಿಯೆಯನ್ನು ತುಂಬಾ ಕಠಿಣಗೊಳಿಸಿದೆ ಅಂತ ಅಂಟಾನೋವ್ ತಿಳಿಸಿದ್ದಾರೆ. ಆದ್ರೆ ಇದ್ರ ಹಿಂದೆ ಬೇರೆ ಯಾವುದಾದ್ರೂ ವಿವಾದ ಇದ್ಯಾ.., ಏನ್ ಕಥೆ ಅಂತ ಮಾತ್ರ ಬಾಯಿಬಿಟ್ಟು ಹೇಳಿಲ್ಲ. ಅತ್ತ ಅಮೆರಿಕ ಕಡೆಯಿಂದ ಕೂಡ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

-masthmagaa.com

Contact Us for Advertisement

Leave a Reply