ಉಗ್ರರ ಫಿನಿಶ್‌ ವಿಚಾರ: ಭಾರತ-ಪಾಕ್‌ ಮಧ್ಯೆ ನಾವು ಮಧ್ಯೆ ಬರಲ್ಲ- ಅಮೆರಿಕ

masthmagaa.com:

ಇತ್ತೀಚಿಗೆ ಭಾರತ, ಪಾಕ್‌ನಲ್ಲಿರೊ ಕೆಲ ಉಗ್ರರನ್ನ ಫಿನಿಶ್‌ ಮಾಡಿದೆ ಅನ್ನೊ ಆರೋಪದ ವಿಚಾರವಾಗಿ ಅಮೆರಿಕ ರಿಯಾಕ್ಟ್‌ ಮಾಡಿದೆ. ಅವರೂ ಈಗ ಪಾಕಿಸ್ತಾನವನ್ನ ಕೈ ಬಿಟ್ಟಿದಾರೆ. ʻಭಾರತ-ಪಾಕ್‌ ನಡುವಿನ ಈ ವಿಚಾರದಲ್ಲಿ ನಾವು ಬರಲ್ಲʼ ಅಂತ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಹೇಳಿದ್ದಾರೆ. ʻಭಾರತ-ಪಾಕ್‌ ನಡುವಿನ ವಿವಾದಗಳನ್ನ ಉಭಯ ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊ‍‍ಳ್ಳೋದಕ್ಕೆ ನಾವು ಪ್ರೋತ್ಸಾಹ ನೀಡ್ತೀವಿʼ ಅಂತೇಳಿದ್ದಾರೆ. ಇತ್ತೀಚಿಗೆ ಬ್ರಿಟಿಷ್‌ ಮೂಲದ‌ ʻದಿ ಗಾರ್ಡಿಯನ್ʼ ಅನ್ನೊ ನ್ಯೂಸ್‌ ಪೇಪರ್‌ ಪಾಕ್‌ ನೆಲದಲ್ಲಿ ಭಾರತ ಸರ್ಕಾರ ಕೆಲ ಉಗ್ರಗಾಮಿಗಳನ್ನ ಹತ್ಯೆ ಮಾಡಿದೆ ಅಂತೇಳಿ ವರದಿ ಮಾಡಿತ್ತು. ಈ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಮಿಲ್ಲರ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ.

-masthmagaa.com

Contact Us for Advertisement

Leave a Reply