ಚೀನಾದ ಔಷಧ ಉತ್ಪಾದಕ ಕಂಪನಿಗಳ ಮೆಲೆ ಅಮೆರಿಕ ನಿರ್ಬಂಧ!

masthmagaa.com:
ಚೀನಾದ ಔಷಧ ಉತ್ಪಾದಕ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ನೋವು ನಿವಾರಕ ಔಷಧಿಗಳನ್ನು ಜನ ಮಾದಕ ವಸ್ತುಗಳ ರೀತಿಯಲ್ಲಿ ಬಳಸುತ್ತಿರುವ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗ್ತಿದ್ದು, ಪ್ರತಿದಿನ ನೂರಾರು ಅಮೆರಿಕನ್ನರು ಪ್ರಾಣ ಕಳ್ಕೊಳ್ತಿದ್ದಾರೆ. ಇದ್ರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಿದೇಶಿ ಮಾದಕ ವಸ್ತು ಸಾಗಾಟಗಾರರ ಮೇಲೆ ನಿರ್ಬಂಧಗಳನ್ನು ಹೇರಲು ಅವಕಾಶ ನೀಡುವ ಒಂದು ಆದೇಶಕ್ಕೆ ಸಹಿಹಾಕಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ಔಷಧಿಯ ರೂಪದ ಅಂತಹ ಮಾದಕ ವಸ್ತುಗಳು ಅಮೆರಿಕ ಪ್ರವೇಶಿಸದಂತೆ ತಡೆಯಲು, ಅದ್ರ ಗ್ಲೋಬಲ್ ಸಪ್ಲೈ ಚೇನ್​ ಮುರಿಯಲು ಈ ಹೊಸ ಆದೇಶ ಅವಕಾಶ ನೀಡಲಿದೆ. ಅದರಂತೆ 4 ಚೀನೀ ಕಂಪನಿಗಳು ಮತ್ತು ಚೌಯೆನ್ ಫ್ಯಾಟ್ ಯಿಪ್ ಅನ್ನೋ ವ್ಯಕ್ತಿ ಮೇಲೆ ನಿರ್ಬಂಧ ವಿಧಿಸಲಾಗಿದೆ. Wuhan Yuancheng Gongchuang Technology Co. Ltd ಕಂಪನಿಯ ಮಾಲೀಕನಾದ ಈ ಚೌಯೆನ್​, ಅಂತಾರಾಷ್ಟ್ರೀಯವಾಗಿ ಇಂಥಹ ವೈದ್ಯಕೀಯ ಮಾದಕ ವಸ್ತುಗಳ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ಹೊಂದಿದ್ದಾನೆ. ಕ್ರಿಪ್ಟೋಕರೆನ್ಸಿಯ ಮೂಲಕ ಈತನ ವ್ಯವಹಾರಗಳು ನಡೆಯುತ್ತವೆ. ಇದೀಗ ಈತನ ಬಂಧನಕ್ಕೆ ಸುಳಿವು ಕೊಟ್ರೆ ಅಮೆರಿಕ 50 ಲಕ್ಷ ಡಾಲರ್ ಬಹುಮಾನ ನೀಡೋದಾಗಿಯೂ ಘೋಷಿಸಿದೆ.
-masthmagaa.com

Contact Us for Advertisement

Leave a Reply