ಗಾಂಜಾ ಸೇವಿಸಿ ಸಿಕ್ಕಿಬಿದ್ದ ಅಮೆರಿಕದ ಅಥ್ಲೀಟ್​.. ಒಲಿಂಪಿಕ್ಸ್​ ಕನಸು ಭಗ್ನ!

masthmagaa.com:

ಟೋಕಿಯೋ ಒಲಿಂಪಿಕ್ಸ್​​ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಅಮೆರಿಕಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಯಾಕಂದ್ರೆ ಅಮೆರಿಕದ ಸ್ಪ್ರಿಂಟರ್​ ಶಕೆರಿ ರಿಚರ್ಡ್​​ಸನ್​ ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಇದರ ಪರಿಣಾಮ ಒಲಿಂಪಿಕ್ಸ್​ನ 100 ಮೀಟರ್​ ರೇಸ್​​ನಲ್ಲಿ ಭಾಗವಹಿಸೋಕೆ ಅವರಿಗೆ ಅವಕಾಶ ಸಿಗೋದು ಅನುಮಾನವಾಗಿದೆ. ಅಂದ್ಹಾಗೆ ಆಟಗಾರರನ್ನ ಟೋಕಿಯೋಗೆ ಕಳಿಸೋಕೂ ಮುನ್ನ ಕಳೆದ ತಿಂಗಳು ಅಮೆರಿಕದಲ್ಲಿ ಒಲಿಂಪಿಕ್ಸ್ ಟ್ರಯಲ್ಸ್ ನಡೆಸಲಾಗಿತ್ತು. ಅದರಲ್ಲಿ ಕೇವಲ 10 ಸೆಕೆಂಡ್ 86 ಸೆಕೆಂಡ್​ಗಳಲ್ಲಿ 100 ಮೀಟರ್​ ಓಡಿದ ಶಕೆರಿ ರಿಚರ್ಡ್​ಸನ್​ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡ್ಬೋದು ಅಂತ ಹೇಳಲಾಗಿತ್ತು. ಆದ್ರೆ ಟ್ರಯಲ್ಸ್ ವೇಳೆ ನಡೆಸಿದ ಗಾಂಜಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್​ ಬಂದಿತ್ತು. ಇದರರ್ಥ ಅವರು ನೀಡಿದ ಟ್ರಯಲ್ಸ್ ಈಗ ಪರಿಗಣಿಸೋಕೆ ಆಗಲ್ಲ. ಅದು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇದರ ನಡುವೆ ಟ್ವೀಟ್ ಮಾಡಿರೋ ಶಕೆರಿ ರಿಚರ್ಡ್​ಸನ್​, ‘ಐ ಯಾಮ್​ ಹ್ಯೂಮನ್’ ಅಂತ ಬರೆದುಕೊಂಡಿದ್ದಾರೆ. ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿ- WADA ಗಾಂಗಾವನ್ನ ಬ್ಯಾನ್ ಮಾಡಿದೆ. ಇದನ್ನ ಸೇವನೆ ಮಾಡಿ ಸಿಕ್ಕಿಬಿದ್ರೆ ಅವರ ಮೇಲೆ 4 ವರ್ಷ ನಿಷೇಧ ಹೇರಲಾಗುತ್ತೆ. ಒಂದ್ವೇಳೆ ಯಾವುದಾದ್ರೂ ಅಥ್ಲೀಟ್​ ತನ್ನ ಸ್ಪೋರ್ಟ್ಸ್​ ಪರ್ಫಾಮೆನ್ಸ್​​ಗೂ ಗಾಂಜಾ ಸೇವಿಸಿದ್ದಕ್ಕೂ ಸಂಬಂಧವಿಲ್ಲ ಅಂತ ಸಾಬೀತುಪಡಿಸಿದ್ರೆ ಈ ನಿಷೇಧವನ್ನ ಮೂರು ತಿಂಗಳಿಗೆ ಇಳಿಸಲಾಗುತ್ತೆ. ಒಂದ್ವೇಳೆ ಆ ಅಥ್ಲೀಟ್​ ತನ್ನ ದೇಶದ ಆ್ಯಂಟಿ ಡೋಪಿಂಗ್ ಬಾಡಿ ಜೊತೆ ಸೇರಿಕೊಂಡು ಅನುಮೋದನೆಗೊಂಡ ಚಿಕಿತ್ಸೆ ಪಡೆಯಲು ಮುಂದಾದ್ರೆ ಆಗ ಈ ಬ್ಯಾನ್ ಅನ್ನ ಒಂದು ತಿಂಗಳಿಗೆ ಇಳಿಸಲಾಗುತ್ತೆ.

-masthmagaa.com

Contact Us for Advertisement

Leave a Reply