ಪಾಕ್‌ ಮಾಜಿ ಪಿಎಂ ಇಮ್ರಾನ್‌ ಖಾನ್‌ ಪದಚ್ಯುತಿ ಹಿಂದಿತ್ತಾ ಅಮೆರಿಕ ಕೈವಾಡ?

masthmagaa.com:

ಕಳೆದ ವರ್ಷ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರನ್ನ ಪಿಎಂ ಹುದ್ದೆಯಿಂದ ಕೆಳಗಿಳಿಸಿದ್ದರ ಹಿಂದೆ ಅಮೆರಿಕದ ಕೈವಾಡವಿದೆ ಅನ್ನೋ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ರಷ್ಯಾ- ಯುಕ್ರೇನ್‌ ಯುದ್ಧದ ವಿಚಾರದಲ್ಲಿ ಖಾನ್‌ ನ್ಯೂಟ್ರಲ್‌ ಆಗಿ ಇದ್ದಿದ್ರಿಂದ ಅವ್ರನ್ನ ಪದಚ್ಯುತಿಗೊಳಿಸಲು ಪಾಕ್‌ ಸರ್ಕಾರಕ್ಕೆ ಅಮೆರಿಕ ಒತ್ತಾಯಿಸಿತ್ತು ಅಂತ ಇಂಟರ್‌ಸೆಪ್ಟ್‌ ಅನ್ನೊ ಸುದ್ಧಿವಾಹಿನಿ ವರದಿ ಮಾಡಿದೆ. 2022ರ ಮಾರ್ಚ್‌ 7ರಂದು ನಡೆದ ಸಭೆಯಲ್ಲಿ ಅಮೆರಿಕದಲ್ಲಿರುವ ಪಾಕಿಸ್ತಾನ ರಾಯಭಾರಿ ಹಾಗೂ ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸಿದ್ದರು ಅಂತ ಪಾಕ್‌ನ್‌ ಕ್ಲಾಸಿಫೈಡ್‌ ಡಾಕ್ಯುಮೆಂಟ್‌ ಒಂದನ್ನ ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ. ಈ ಸಭೆ ಬಳಿಕ ಪಾಕಿಸ್ತಾನ ಸಂಸತ್ತಿನಲ್ಲಿ ಅವಿಶ್ವಾಸ ಮತವನ್ನ ನಡೆಸಿ ಖಾನ್‌ರನ್ನ ಅಧಿಕಾರದಿಂದ ತೆಗೆದು ಹಾಕಲಾಗಿದೆ. ಆದ್ರೆ ಪಾಕ್‌ ಸೇನೆಯ ಬೆಂಬಲದಿಂದ ಇಮ್ರಾನ್‌ರನ್ನ ಪದಚ್ಯುತಿಗೊಳಿಸಲಾಗಿದೆ ಅಂತ ನಂಬಲಾಗಿದೆ. ಈ ಕಾರಣಕ್ಕೆ ಇಮ್ರಾನ್‌ ಬೆಂಬಲಿಗರು ಹಾಗೂ ಪಾಕ್‌ ಸೇನೆ ನಡುವೆ ಬಿಕ್ಕಟ್ಟು ಮುಂದುವರೆದಿದೆ. ಅದ್ರೆ ಅಮೆರಿಕದ ಪ್ರಭಾವದಿಂದ ಇಮ್ರಾನ್‌ರನ್ನ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲಾಗಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಅಂದ್ಹಾಗೆ ಇಮ್ರಾನ್‌ ಖಾನ್‌ ಕೂಡ ತಮ್ಮ ಪದಚ್ಯುತಿ ಹಿಂದೆ ವಿದೇಶಿ ಕೈವಾಡ ಇದೆ ಅಂತ ಅರೋಪಿಸಿದ್ದರು. ಇಮ್ರಾನ್‌ ಖಾನ್‌ರನ್ನ ತೆಗೆದು ಹಾಕ್ಬೇಕು ಇಲ್ಲವಾದ್ರೆ ಪಾಕಿಸ್ತಾನ ಅದರ ಪರಿಣಾಮ ಅನುಭವಿಸಬೇಕಾಗುತ್ತೆ ಅಂತ ವಿದೇಶಿ ರಾಷ್ಟ್ರವೊಂದು ನಮಗೆ ಬೆದರಿಕೆ ಪತ್ರ ಕಳಿಸಿದೆ ಅಂತ ಇಮ್ರಾನ್‌ ಆರೋಪಿಸಿದ್ದರು. ಅಷ್ಟೆ ಅಲ್ದೆ ನಮ್ಮ ಸರ್ಕಾರವನ್ನು ಉರುಳಿಸೋಕೆ ವಿಪಕ್ಷಗಳಿಗೆ ವಿದೇಶದಿಂದ ಫಂಡ್‌ ಬಂದಿತ್ತು ಅಂತ ಅರೋಪಿಸಿದ್ದರು. ಆದ್ರೆ ಈ ಎಲ್ಲಾ ಅರೋಪಗಳನ್ನ ಅಮೆರಿಕ ತಳ್ಳಿ ಹಾಕಿತ್ತು. ಇದೀಗ ಇಂಟರ್‌ಸೆಪ್ಟ್‌ ವರದಿಯಿಂದ ಈ ವಿಚಾರ ಮತ್ತೆ ಚರ್ಚೆಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply