ಅಮೆರಿಕಗೆ ಹಾರಲು ಕಾಯ್ತ ಇದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ…

masthmagaa.com:

ಹೆಚ್​​​1 ಬಿ ವೀಸಾ ಸೇರಿದಂತೆ ವಿವಿಧ ವೀಸಾ ಪಡೆಯೋರಿಗೆ ಮುಂದಿನ ಒಂದು ವರ್ಷದವರೆಗೆ ಅಮೆರಿಕ ಸಿಹಿ ಸುದ್ದಿ ನೀಡಿದೆ. ಅದೇನಂದ್ರೆ 2022ರ ಡಿಸೆಂಬರ್​ 31ರವರೆಗೆ ಅಂದ್ರೆ ಮುಂದಿನ ಒಂದು ವರ್ಷ ಫುಲ್ ವೀಸಾ ಪಡೆಯಲು ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕಾದ ಅಗತ್ಯತೆ ಇರೋದಿಲ್ಲ. ಜೊತೆಗೆ ವೀಸಾ ರಿನಿವಲ್ ಮಾಡಿಸಿಕೊಳ್ಳೋದಕ್ಕೂ ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗೋ ಅಗತ್ಯತೆ ಇರೋದಿಲ್ಲ. ಅಮೆರಿಕದ ಸ್ಟೇಟ್ ಡಿಪಾರ್ಟ್​​​ಮೆಂಟ್ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇದ್ರಲ್ಲಿ ಹೆಚ್​​1ಬಿ, ಹೆಚ್​3, ಎಲ್ ಮತ್ತು ಒ ವೀಸಾ ಕೂಡ ಸೇರಿವೆ. ಕೊರೋನಾ ಕಾರಣದಿಂದಾಗಿ ವೀಸಾ ವಿಭಾಗದ ಕಾರ್ಯಕ್ಷಮತೆ ಕಡಿಮೆಯಾಗಿದೆ. ಆದ್ರೆ ಇದೀಗ ಅಂತಾರಾಷ್ಟ್ರೀಯ ಪ್ರಯಾಣ ಶುರುವಾಗ್ತಿರೋದ್ರಿಂದ ವೀಸಾಗಾಗಿ ಜನ ಕಾಯೋದನ್ನು ತಪ್ಪಿಸಲು ಈ ಹೆಜ್ಜೆ ಇಡ್ತಿದ್ದೀವಿ ಅಂತ ಕೂಡ ಅಮೆರಿಕದ ಸ್ಟೇಟ್ ಡಿಪಾರ್ಟ್​​ಮೆಂಟ್ ಹೇಳಿದೆ.

-masthmagaa.com

Contact Us for Advertisement

Leave a Reply