ಅದಾನಿ ಗ್ರೂಪ್‌ನ ಶ್ರೀಲಂಕಾದ ಬಂದರಿಗೆ ಅಮೆರಿಕ ಹಣ ಸಹಾಯ! ಎಷ್ಟು ಹಣ ನೀಡಲಿದೆ ಅಮೆರಿಕ?

masthmagaa.com:

ಅದಾನಿ ಗ್ರೂಪ್‌ ಭಾಗಶಃ ಮಾಲಿಕತ್ವ ಹೊಂದಿರೋ ಕೊಲಂಬೊ ಪೋರ್ಟ್‌ ಟರ್ಮಿನಲ್‌ ಯೋಜನೆಗೆ ಅಮೆರಿಕ ಹೂಡಿಕೆ ಮಾಡಲಿದೆ ಅಂತ ತಿಳಿದು ಬಂದಿದೆ. ಈ ಬಗ್ಗೆ ಯುಎಸ್‌ ಇಂಟರ್‌ನ್ಯಾಷನಲ್‌ ಡೆವೆಲಪ್‌ಮೆಂಟ್‌ ಫೈನಾನ್ಸ್‌ ಕಾರ್ಪೊರೇಷನ್‌ (DFC) ತಿಳಿಸಿದ್ದು, ಅಮೆರಿಕ 553 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 4.58 ಸಾವಿರ ಕೋಟಿ ರೂಪಾಯಿ ಬಂಡವಾಳ ಹಾಕಲಿದೆ ಅಂತ ಹೇಳಿದೆ. ಇನ್ನು ಈ ಪೋರ್ಟ್‌ನ ವೆಸ್ಟ್ ಟರ್ಮಿನಲ್ ಪ್ರಾಜೆಕ್ಟ್​ನ ಶೇ. 51ರಷ್ಟು ಪಾಲನ್ನ ಅದಾನಿ ಗ್ರೂಪ್ ಹೊಂದಿದೆ. ಅಂದ್ಹಾಗೆ ಈ ಕೊಲಂಬೋ ಬಂದರಿನಲ್ಲಿ ವಿವಿಧ ಟರ್ಮಿನಲ್​ಗಳಿದ್ದು, ಇನ್ನೂ ಕೆಲ ಟರ್ಮಿನಲ್‌ಗಳು ನಿರ್ಮಾಣ ಹಂತದಲ್ಲಿವೆ. ಇದ್ರ ಒಂದು ಟರ್ಮಿನಲ್‌ನ್ನ ಚೀನಾದ ಕಂಪನಿಯೊಂದು ನಿರ್ಮಾಣ ಮಾಡ್ತಿದೆ. ಹೀಗಾಗಿ ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಾಬಲ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಅಮೆರಿಕ ಮತ್ತು ಭಾರತ ಕೆಲಸ ಮಾಡ್ತಿರೋ ನಡುವೆಯೇ ಈ ಬೆಳವಣಿಗೆ ಕಂಡುಬಂದಿದೆ.

-masthmagaa.com

Contact Us for Advertisement

Leave a Reply