ಅಮೆರಿಕದಲ್ಲಿ 5 ಲಕ್ಷ ಜನ ಬಲಿ: ಬೈಡೆನ್‌ ಭಾವುಕ!

masthmagaa.com

ಅಮೆರಿಕದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 5 ಲಕ್ಷ ದಾಟಿದೆ. ಇದು ಯಾವುದೇ ದೇಶಕ್ಕೂ ಎದೆ ನಡುಗಿಸೋ ನಂಬರ್. 5 ಲಕ್ಷ ಜನ.. ಒಂದೇ ವರ್ಷದಲ್ಲಿ ಒಂದು ಕಾಯಿಲೆಗೆ ಬಲಿಯಾಗೋದು ಅಂದ್ರೆ ಸಣ್ಣ ವಿಚಾರ ಅಲ್ಲ. ಈ ಸಂದರ್ಭದಲ್ಲಿ ದೇಶ ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋಸೆಫ್ ಬೈಡೆನ್ ಇದು ನಮ್ಮ ಪಾಲಿಗೆ ಅತ್ಯಂತ ದುಃಖದ ಕ್ಷಣ. 5,00,071 ಅಮೆರಿಕನ್ನರು ಮೃತಪಟ್ಟಿದ್ದಾರೆ. ಇದು ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧ ಹಾಗೂ ವಿಯೆಟ್ನಾಮ್ ಯುದ್ಧ ಮೂರೂ ಸೇರಿಸಿದರೆ ಮೃತಪಟ್ಟ ಅಮೆರಿಕನ್ನರಿಗಿಂತಲೂ ಜಾಸ್ತಿ ಅಂತ ಬೈಡೆನ್ ದುಃಖ ತೋಡಿಕೊಂಡಿದ್ದಾರೆ. ಇಡೀ ಜಗತ್ತಿನ ಜನಸಂಖ್ಯೆಯಲ್ಲಿ ಅಮೆರಿಕದ ಜನಸಂಖ್ಯೆ ಕೇವಲ 4 ಪರ್ಸೆಂಟ್. ಆದ್ರೆ ಕೊರೋನಾದಿಂದಾಗಿ ಇಡೀ ಜಗತ್ತಲ್ಲಿ ಮೃತಪಟ್ಟವರಲ್ಲಿ 19 ಪರ್ಸೆಂಟ್ ಬರೀ ಅಮೆರಿಕದಲ್ಲೇ ಆಗಿದೆ. ಇದು ಕೊರೋನಾ ಅಮೆರಿಕವನ್ನ ಯಾವ ರೀತಿ ಶೇಕ್ ಮಾಡ್ತಿದೆ ಅನ್ನೋದಕ್ಕೆ ಒಂದು ಸಣ್ಣ ಎಕ್ಸಾಂಪಲ್.

-masthmagaa.com

Contact Us for Advertisement

Leave a Reply