ಅಫ್ಘಾನಿಸ್ತಾನದಿಂದ ಕಂಪ್ಲೀಟಾಗಿ ಹೊರಗೆ ಹೋದ ಅಮೆರಿಕ ಸೇನೆ!

masthmagaa.com:

20 ವರ್ಷಗಳ ನಿರಂತರ ಸಂಘರ್ಷದ ಬಳಿಕ ಅಫ್ಘಾನಿಸ್ತಾನದಿಂದ ರಾತ್ರೋರಾತ್ರಿ ಅಮೆರಿಕ ಹೊರಬಿದ್ದಿದೆ. ಡೆಡ್​​ಲೈನ್​​​ ಅವಧಿಗೂ ಒಂದು ದಿನ ಮುನ್ನವೇ ಅಫ್ಘಾನಿಸ್ತಾನದಿಂದ ಅಮೆರಿಕದ ಯೋಧರು ಹೊರಗೆ ಹಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಅಮೆರಿಕದ ಸ್ಟೇಟ್ ಡಿಪಾರ್ಟ್​ಮೆಂಟ್​, ಯೋಧ ವಿಮಾನ ಹತ್ತುತ್ತಿರುವ ಫೋಟೋ ಟ್ವೀಟ್ ಮಾಡಿ, ಅಫ್ಘಾನಿಸ್ತಾನ ತೊರೆಯುತ್ತಿರುವ ಕೊನೆಯ ಯೋಧ..ಮೇಜರ್ ಜನರಲ್ ಕ್ರಿಸ್ ದೊನಾಹುಯೆ ಅಂತ ಬರೆದುಕೊಂಡಿದೆ. ಅದೇ ರೀತಿ ಅಮೆರಿಕದ ಜನರಲ್ ಕೆನ್ನೆತ್ ಮೆಕೆಂಜೀ ಮಾತನಾಡಿ, ಇವತ್ತಿಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ಸಂಘರ್ಷ ಅಂತ್ಯವಾಗ್ತಿದೆ. ಸೇನಾ ಹಿಂತೆಗೆತ ಕಂಪ್ಲೀಟ್ ಆಗಿದೆ. ಸೇನೆ ನಡೆಸುತ್ತಿದ್ದ ಸ್ಥಳಾಂತರ ಪ್ರಕ್ರಿಯೆ ಕೂಡ ಅಂತ್ಯವಾಗಿದೆ ಅಂತ ಘೋಷಿಸಿದ್ದಾರೆ. ಕೊನೆಯ ವಿಮಾನ ಮಂಗಳವಾರ ಶುರುವಾಗೋ ಒಂದು ನಿಮಿಷ ಮುನ್ನ ಅಂದ್ರೆ ಸೋಮವಾರ ರಾತ್ರಿ 11.59ಕ್ಕೆ ಕಾಬೂಲ್ ಏರ್​ಪೋರ್ಟ್​​​ನಿಂದ ಹಾರಿದೆ. ಅಧ್ಯಕ್ಷ ಜೋ ಬೈಡೆನ್ ಇವತ್ತು ಅಫ್ಘಾನಿಸ್ತಾನ ಸೇನೆ ಹಿಂತೆಗೆತ ವಿಚಾರವಾಗಿ ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಇದ್ರ ಬೆನ್ನಲ್ಲೇ ಕಾಬೂಲ್​ನಲ್ಲಿ ತಾಲಿಬಾನಿಗಳು ಖುಷಿಯಲ್ಲಿ ತೇಲಿ ಹೋಗಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ, ಅಮೆರಿಕ ಸೇನೆಯ ನಿರ್ಗಮನಕ್ಕೆ ಹಬ್ಬ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನಿಗಳ ವಕ್ತಾರ ಝೈಬುಲ್ಲಾ ಮುಜಾಹಿದ್​, ಅಮೆರಿಕ ಸೇನೆ ಹೋಗ್ತಿದ್ದಂತೆ ಅಫ್ಘಾನಿಸ್ತಾನಕ್ಕೆ ಫುಲ್ ಸ್ವಾತಂತ್ರ್ಯ ಸಿಕ್ಕಂತಾಗಿದೆ ಅಂತ ಹೇಳಿದ್ದಾರೆ. ಇನ್ನು ಮತ್ತೋರ್ವ ನಾಯಕ ಅನಸ್ ಹಕ್ಕಾನಿ ಮಾತನಾಡಿ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗ್ತಿರೋದಕ್ಕೆ ನನ್ನ ಬಗ್ಗೆ ನನಗೆ ಹೆಮ್ಮೆಯಾಗ್ತಿದೆ ಅಂತ ಹೇಳಿದ್ದಾರೆ.

ಏನೇ ಆದ್ರೂ 20 ವರ್ಷಗಳ ಹಿಂದೆ ತಾಲಿಬಾನಿಗಳು ಅಧಿಕಾರದಲ್ಲಿದ್ದಾಗ ಅವರನ್ನು ಪುಡಿ ಮಾಡೋಕೆ ಅಂತ ಹೋಗಿದ್ದ ಅಮೆರಿಕ, ಈಗ ಮತ್ತೆ ಅಫ್ಘಾನಿಸ್ತಾನವನ್ನು ಅದೇ ತಾಲಿಬಾನಿಗಳ ಕೈಗೆ ಕೊಟ್ಟು ವಾಪಸ್ ಹೋಗಿದೆ. ಇಷ್ಟು ವರ್ಷಗಳ ಕಾಲ ಬಿಲಿಯನ್​ಗಟ್ಲೆ ಡಾಲರ್ ಖರ್ಚು ಮಾಡಿದ್ರೂ, ಹತ್ತತ್ರ ಎರಡೂವರೆ ಸಾವಿರ ಮಂದಿ ಯೋಧರು ಪ್ರಾಣ ಕಳೆದುಕೊಂಡ್ರೂ ಕೊನೆಗೂ ತಾಲಿಬಾನಿಗಳ ಕೈ ಮೇಲಾಗಿದೆ.

-masthmagaa.com

Contact Us for Advertisement

Leave a Reply