ಪ್ಯಾಲಸ್ತೀನ್‌ಗೆ ‌UN ಪೂರ್ಣ ಸದಸ್ಯತ್ವ ವಿಚಾರ: ವಿಟೋ ಬಳಸಿದ ಅಮೆರಿಕ!

masthmagaa.com:

ವಿಶ್ವದ ಪಾಲಿಗೆ ತಾನು ಮಹಾರಕ್ಷಕ ಅಂತ ಬಿಂಬಿಸಿಕೊಳ್ಳೋ ಅಮೆರಿಕ ಪ್ಯಾಲಸ್ತೀನ್‌ ಮಾನ್ಯತೆಗೆ ಕೊಕ್ಕೆ ಹಾಕಿದೆ. ಪ್ಯಾಲಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡೊ ಪ್ರಸ್ತಾಪಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತದಾನ ನಡೆದಿದೆ. ಈ ವೇಳೆ ಅಮೆರಿಕ ಈ ಪ್ರಸ್ತಾಪವನ್ನ ತನ್ನ ವಿಟೋ ಅಧಿಕಾರ ಬಳಸಿ ತಡೆ ಹಿಡಿದಿದೆ. ಇದಕ್ಕೆ ರಿಯಾಕ್ಟ್‌ ಮಾಡಿರೊ ಪ್ಯಾಲಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌, ʻಅಮೆರಿಕ ನಡೆ ನ್ಯಾಯ ಸಮ್ಮತವಲ್ಲ, ನಮಗೆ ಅನ್ಯಾಯ ಮಾಡ್ತಿದೆʼ ಅಂತ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ವಿಶ್ವಸಂಸ್ಥೆಯಲ್ಲಿನ ಅಮೆರಿಕಾದ ಉಪ ರಾಯಭಾರಿ ಮಾತನಾಡಿ, ಅಮೆರಿಕ ಪ್ಯಾಲಸ್ತೀನ್‌ ವಿಚಾರವಾಗಿ ಟು ಸ್ಟೇಟ್‌ ಪಾಲಿಸಿಯನ್ನ ಸ್ಟ್ರಾಂಗ್‌ ಆಗಿ ಸಪೋರ್ಟ್‌ ಮಾಡೋದನ್ನ ಕಂಟಿನ್ಯೂ ಮಾಡುತ್ತೆ. ಆದ್ರೆ ಈ ಮತವು ಪ್ಯಾಲಸ್ತೀನ್‌ ಸ್ಟೇಟ್‌ಗೆ ವಿರೋಧ ಅಂತ ಅರ್ಥ ಅಲ್ಲ. ಬದಲಾಗಿ ಇಬ್ರೂ ಮಾತಾಡ್ಕೊಂಡು ಈ ನಿಲುವಿಗೆ ಬರ್ಬೇಕು ಅನ್ನೋದು ನಮ್ಮ ಉದ್ದೇಶ ಅಂತ ಸಮರ್ಥನೆ ನೀಡಿದ್ದಾರೆ. ಇನ್ನು ಈ ಮತದಾನದಿಂದ ಬ್ರಿಟನ್‌ ಮತ್ತು ಸ್ವಿಜರ್‌ಲ್ಯಾಂಡ್‌ ದೂರವಿದ್ರೆ ಇನ್ನುಳಿದ 12 ಕೌನ್ಸಿಲ್‌ ಸದಸ್ಯ ರಾಷ್ಟ್ರಗಳು ಪ್ಯಾಲಸ್ತೀನ್‌ಗೆ ವಿಶ್ವಸಂಸ್ಥೆಯ ಸದಸ್ಯತ್ವ ನೀಡಲು ಸಮ್ಮತಿ ನೀಡಿವೆ.

-masthmagaa.com

Contact Us for Advertisement

Leave a Reply