ಉತ್ತರ ಕನ್ನಡದಲ್ಲಿಂದು 51 ಜನರಿಗೆ ಕೊರೋನಾ ಸೋಂಕು..!

masthmagaa.com:

ಉತ್ತರ ಕನ್ನಡ ಜಿಲ್ಲೆಯಲ್ಲಿಂದು 51 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, ಕಾರವಾರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,170 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇವತ್ತು 67 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 728 ಸಕ್ರಿಯ ಪ್ರಕರಣಗಳಿವೆ.

ಇವತ್ತಿನ ಪ್ರಕರಣಗಳು:

ಕುಮಟಾ – 14

ಹಳಿಯಾಳ – 13

ಕಾರವಾರ – 5

ಮುಂಡಗೋಡು – 5

ಜೋಯಿಡಾ – 4

ಭಟ್ಕಳ – 3

ಅಂಕೋಲ – 2

ಶಿರಸಿ – 2

ಯಲ್ಲಾಪುರ  – 2

ಹೊನ್ನಾವರ – 1

-masthmagaa.com

Contact Us for Advertisement

Leave a Reply