ಲಸಿಕೆ ಹಾಕಿಸಿಕೊಂಡವರು ಹೊರಗಡೆ ಮಾಸ್ಕ್ ಹಾಕದೆ ಓಡಾಡಬಹುದು!

masthmagaa.com:

ಅಮೆರಿಕದಲ್ಲಿ ಕೊರೋನಾ ಪ್ರಕರಣಗಳು ನಿಧಾನವಾಗಿ ಕಮ್ಮಿಯಾಗ್ತಿರೋ ಹಿನ್ನೆಲೆ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರು ಫೇಸ್​​ ಮಾಸ್ಕ್​ ಧರಿಸದೇ ಹೊರಗಡೆ (ಔಟ್​​ಡೋರ್​) ಓಡಾಡಬಹುದು ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ. ಅಂದ್ರೆ ಸಂಪೂರ್ಣವಾಗಿ ಲಸಿಕೆ ಹಾಕ್ಕೊಂಡೋರು ಪಾರ್ಕ್​​ನಲ್ಲಿ ತಮ್ಮ ಸ್ನೇಹಿತರನ್ನ ಭೇಟಿಯಾಗುವಾಗ, ಪಿಕ್​ನಿಕ್​ಗೆ ಹೋಗುವಾಗ ಮಾಸ್ಕ್​ ಹಾಕದೇ ಹೋಗಬಹುದು ಅಂತರ್ಥ. ಆದ್ರೆ ದೊಡ್ಡ ಸಂಖ್ಯೆಯಲ್ಲಿ ಜನ ಗುಂಪು ಸೇರುವ ಪ್ರದೇಶದಲ್ಲಿ.. ಅಂದ್ರೆ ಸ್ಟೇಡಿಯಂ ಅಥವಾ ಕಾನ್ಫರೆನ್ಸ್ ಅಥವಾ ಕಾನ್ಸರ್ಟ್​​ಗೆ ಹೋಗೋದಾದ್ರೆ ಅದು ಔಟ್​ಡೋರ್​ನಲ್ಲಿದ್ರೂ ಲಸಿಕೆ ಹಾಕಿಸಿಕೊಂಡೋರು ಮಾಸ್ಕ್ ಧರಿಸಬೇಕು ಅಂತಾನೂ ಸ್ಪಷ್ಟಪಡಿಸಿದ್ದಾರೆ. ಇಂಡೋರ್​​ನಲ್ಲಿ ಕೊರೋನಾ ಸೋಂಕು ಹರಡುತ್ತಿರುವ ಪ್ರಮಾಣ ಹೆಚ್ಚಾಗಿದೆ ಮತ್ತು ಅಮೆರಿಕದಲ್ಲಿ ಲಸಿಕೆ ಅಭಿಯಾನ ಕೂಡ ವೇಗ ಪಡೆದಿರೋದ್ರಿಂದ ಲಸಿಕೆ ಹಾಕ್ಕೊಂಡೋರಿಗೆ ಔಟ್​ಡೋರ್​ನಲ್ಲಿ ಮಾಸ್ಕ್​ ಹಾಕೋದ್ರಿಂದ ವಿನಾಯ್ತಿ ಕೊಡಬೇಕು ಅನ್ನೋ ಕೂಗು ಅಮೆರಿಕದಲ್ಲಿ ಕೇಳಿ ಬಂದಿತ್ತು. ಸಂಪೂರ್ಣವಾಗಿ ಲಸಿಕೆ ಹಾಕ್ಕೊಂಡೋರಿಗೆ ಕೆಲವೊಂದು ಬೆನಿಫಿಟ್​ ಕೊಡ್ಬೇಕು ಅಂತ ಚರ್ಚೆಯಾಗ್ತಿತ್ತು. ಇದರ ಬೆನ್ನಲ್ಲೇ ಜೋ ಬೈಡೆನ್​ ಈ ಘೋಷಣೆ ಮಾಡಿದ್ದಾರೆ. ಅಮೆರಿಕದಲ್ಲಿ ಇದುವರೆಗೆ 43 ಪರ್ಸೆಂಟ್​​ ಜನ ಕನಿಷ್ಠ ಒಂದು ಡೋಸ್​ ಕೊರೋನಾ ಲಸಿಕೆಯನ್ನ ಚುಚ್ಚಿಸಿಕೊಂಡಿದ್ರೆ, 29 ಪರ್ಸೆಂಟ್​ ಜನ ಎರಡು ಡೋಸ್​ ಲಸಿಕೆ ಹಾಕಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಎರಡು ಡೋಸ್​ನ ಫೈಝರ್-ಬಿಯೋನ್​ಟೆಕ್​ ಲಸಿಕೆ, ಮೊಡೆರ್ನಾ ಲಸಿಕೆ ಮತ್ತು ಸಿಂಗಲ್ ಡೋಸ್​ನ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಚುಚ್ಚಲಾಗ್ತಿದೆ.

-masthmagaa.com

Contact Us for Advertisement

Leave a Reply