ಹಾಸ್ಯ ನಟ ವೇಣು ಇನ್ನಿಲ್ಲ..ಏನಾಗಿತ್ತು ಗೊತ್ತಾ..?

ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಾಮಿಡಿ ನಟ ವೇಣು ಮಾಧವ್ ಕೊನೆಯುಸಿರೆಳೆದಿದ್ದಾರೆ. 39 ವರ್ಷ ವಯಸ್ಸಾಗಿದ್ದ ಇವರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟರಾಗಿ ಅಭಿನಯಿಸಿದ್ದರು. ವೇಣು ಅವರ ಸ್ನೇಹಿತರ ವಂಶಿ ಕಾಕಾ ತಮ್ಮ ಟ್ವಿಟ್ಟರ್ ಅಕೌಂಟ್‍ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ 12.20ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ವೈದ್ಯರೇ ಸ್ಪಷ್ಟಪಡಿಸಿದ್ದಾರೆ ಅಂತ ವಂಶಿ ಮಾಹಿತಿ ನೀಡಿದ್ದಾರೆ. ಲಿವರ್ ಮತ್ತು ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ವೇಣು ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

Contact Us for Advertisement

Leave a Reply