ಶುಕ್ರನ ಮೇಲಿದೆಯಂತೆ ಆಕ್ಸಿಜನ್!‌ ಕೆದಕಿದಷ್ಟೂ ನೀಗೂಢ ನಮ್ಮ ಅವಳಿ ಗ್ರಹ!

masthmagaa.com:

ನಮ್ಮ ಅವಳಿ ಗ್ರಹ ಶುಕ್ರ ಹೊಸ ಸರ್‌ಪ್ರೈಸ್‌ ಒಂದನ್ನ ಕೊಟ್ಟಿದೆ. ಶುಕ್ರನ ವಾತಾವರಣದಲ್ಲಿ ಆಮ್ಲಜನಕ ಇದೆ ಅನ್ನೊ ಲೇಟೆಸ್ಟ್‌ ಮಾಹಿತಿ ಹೊರಬಂದಿದೆ. ನಾಸಾ ಮತ್ತು ಜರ್ಮನ್‌ ಏರೋಸ್ಪೇಸ್‌ ಸಹಯೋಗದ SOFIA ವೀಕ್ಷಣಾಲಯದ ಅವೆಗೆಂಪು(Infrared) ಟೆಲಿಸ್ಕೋಪ್‌ ಈ ಅನ್ವೇಷಣೆ ಮಾಡಿದೆ. ಆದ್ರೆ ಇಲ್ಲಿರೋದು ನಾವು ಉಸಿರಾಡುವ O₂ ಆಕ್ಸಿಜನ್‌ ಅಲ್ಲ. ನಾವು ಉಸಿರಾಡೊ ಆಮ್ಲಜನಕ 2 ಆಕ್ಸಿಜನ್‌ ಅಣುಗಳು ಸೇರಿ ತಯಾರಾಗಿದ್ರೆ, ಶುಕ್ರನ ವಾತಾವರಣದಲ್ಲಿ ಪತ್ತೆಯಾಗಿರೋದು ಸಿಂಗಲ್‌ ಅಣುವುಳ್ಳ ಆಕ್ಸಿಜನ್(‌O₁) ಇದು ಅತ್ಯಂತ ಅನ್‌ಸ್ಟೇಬಲ್‌ ಹಾಗೂ ರಿಯಾಕ್ಟಿವ್‌ ಆಗಿರುತ್ತೆ. ಈ ಸಿಂಗಲ್‌ ಆಕ್ಸಿಜನ್‌ ಶುಕ್ರಗ್ರಹದಲ್ಲಿ ಮೈನಸ್‌ 120 ರಿಂದ ಮೈನಸ್ 160 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿದೆ ಅಂತ ಗೊತ್ತಾಗಿದೆ. ಅಂದ್ಹಾಗೆ ಶುಕ್ರ ಗ್ರಹದಲ್ಲಿ ಭಾರಿ ಸಾಂಧ್ರತೆಯ ವಾತಾವರಣ ಇದ್ದು, ಅದ್ರಲ್ಲಿ ಬರೋಬ್ಬರಿ 96.5% ಇಂಗಾಲದ ಡೈ ಆಕ್ಸೈಡ್‌ ಇದೆ. ಭೂಮಿ ಮೇಲಿರೊ ಯಾವ ಜೀವಿಯೂ ಶುಕ್ರನ ಮೇಲೆ ಬದುಕೋ ಚಾನ್ಸ್‌ ಇಲ್ಲ. ಈಗ ಪತ್ತೆಯಾಗಿರೊ ಆಕ್ಸಿಜನ್‌ನಿಂದ ಶುಕ್ರ ಗ್ರಹದ ವಿಕಾಸದ ಅಧ್ಯಯನಕ್ಕೆ ಉಪಯೋಗವಾಗತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇತ್ತ ಶುಕ್ರನ ವಾತಾವರಣದಲ್ಲಿ ಆಕ್ಸಿಜನ್‌ ಪತ್ತೆ ಆಗಿರೋದ್ರಿಂದ ಇಸ್ರೋ ವಿಜ್ಞಾನಿಗಳು ಥ್ರಿಲ್‌ ಆಗಿದ್ದಾರೆ. ಯಾಕಂದ್ರೆ 2024ರ ಡಿಸೆಂಬರ್‌ನಲ್ಲಿ ಇಸ್ರೋದ ಮಹತ್ವಾಕಾಂಕ್ಷಿ ʻಶುಕ್ರಯಾನ್‌ʼ ಯೋಜನೆಯ ರಾಕೆಟ್ ಶುಕ್ರನ ಬಳಿಗೆ ಹಾರಲಿದೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನ ರೆಡಿ ಮಾಡ್ಕೊಳ್ಳೋಕೆ ಇಸ್ರೋಗೆ ಒಳ್ಳೇ ಚಾನ್ಸ್‌ ಸಿಕ್ಕಿದೆ. ಅಂದ್ಹಾಗೆ ಸ್ನೇಹಿತರೆ 3 ಆಕ್ಸಿಜನ್‌ ಅಣುಗಳು ಒಟ್ಟಿಗೆ ಇದ್ರೆ(O₃) ಅದನ್ನೆ ಓಜೋನ್‌ ಅಂತಾರೆ.

-masthmagaa.com

Contact Us for Advertisement

Leave a Reply