ಚೀನಾದಲ್ಲಿ ಮಹಾಮಳೆ: ಪ್ರವಾಹದ ಭೀತಿಗೆ ಡ್ಯಾಂ ಬ್ಲಾಸ್ಟ್​!

masthmagaa.com:

ಚೀನಾದಲ್ಲಿ ಮಳೆ ಮತ್ತು ಪ್ರವಾಹದ ಪರಿಸ್ಥಿತಿ ನಿರಂತರವಾಗಿ ಜಾಸ್ತಿಯಾಗ್ತಿದೆ. ಈ ನಡುವೆ ಅತಿ ಹೆಚ್ಚು ಜನಸಂಖ್ಯೆ ಇರುವ ಹೆನಾನ್​ ಪ್ರಾಂತ್ಯದ ಪ್ರಾಂತ್ಯದ ಜನರ ರಕ್ಷಣೆಗಾಗಿ ಚೀನೀ ಯೋಧರು ಒಂದು ಡ್ಯಾಂ ಒಡೆದಿದ್ದಾರೆ. ಇಲ್ಲಿರೋ ಲುಯೋಯಾಂಗ್​​​ ನಗರದಲ್ಲಿ ಮಂಗಳವಾರ ರಾತ್ರಿ ಡ್ಯಾಂ ಒಡೆದು ನೀರನ್ನು ಬೇರೆ ಕಡೆಗೆ ಹರಿಸಲಾಗಿದೆ. ಮಧ್ಯ ಚೀನಾದಲ್ಲಿರೋ ಹೆನಾನ್ ಪ್ರಾಂತ್ಯದಲ್ಲಿ ಈಗಾಗಲೇ ಪ್ರವಾಹಕ್ಕೆ 25 ಮಂದಿ ಬಲಿಯಾಗಿದ್ದಾರೆ. 7 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಶೋಧಕಾರ್ಯ ಮುಂದುವರಿಸಿವೆ. ಸಾರಿಗೆ ವ್ಯವಸ್ಥೆ ಕಂಪ್ಲೀಟಾಗಿ ಅಸ್ತವ್ಯಸ್ಥವಾಗಿದ್ದು, 10 ಸಾವಿರ ಮಂದಿಯನ್ನು ಹೊತ್ತು ಸಾಗುತ್ತಿದ್ದ ಸುಮಾರು 10 ರೈಲುಗಳು ನಿಂತಲ್ಲೇ ನಿಂತಿದ್ದು, ಅದ್ರಲ್ಲೂ ಮೂರು ರೈಲುಗಳು 40 ಗಂಟೆಗಳಿಂದ ನಿಂತಲ್ಲೇ ನಿಂತಿವೆ. ಇನ್ನು ರಸ್ತೆ ವಿಚಾರಕ್ಕೆ ಬಂದ್ರೆ ಒಟ್ಟು 26 ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ ಅಂತ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಕರೆಂಟ್ ಇಲ್ಲದೇ ಝೆಂಗ್​ಶೌ ಯುನಿವರ್ಸಿಟಿಗೆ ಭಾರಿ ತೊಂದ್ರೆಯಾಗಿದೆ. ಇಲ್ಲಿರೋ ವೆಂಟಿಲೇಟರ್​ಗಳು ವರ್ಕ್​ ಆಗದೇ, ಆಸ್ಪತ್ರೆ ಸಿಬ್ಬಂದಿ ರೋಗಿಗಳಿಗೆ ಕೈಯಿಂದ ಪಂಪ್ ಮಾಡಿದ ಏರ್​​​ಬ್ಯಾಗ್​​ಗಳನ್ನು ನೀಡ್ತಿದ್ದಾರೆ. ಸುಮಾರು 600ಕ್ಕೂ ಹೆಚ್ಚು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಶಿಫ್ಟ್​ ಕೂಡ ಮಾಡಲಾಗಿದೆ. ಹೆನಾನ್ ಪ್ರಾಂತ್ಯದಲ್ಲಿ ಹಲವಾರು ಸಾಂಸ್ಕೃತಿಕ ಕೇಂದ್ರಗಳಿದ್ದು, ಉದ್ಯಮ ಮತ್ತು ಕೃಷಿಯ ಪ್ರಮುಖ ಸ್ಥಾನವಾಗಿವೆ. ಇನ್ನು ಗುವಾಂಗ್​ಡಾಂಗ್​ ಪ್ರಾಂತ್ಯದಲ್ಲಿ ಝುಹೈ ನಗರದಲ್ಲಿ ಪ್ರವಾಹದಿಂದಾಗಿ ಹೈವೇ ಸುರಂಗದಲ್ಲಿ ಸಿಲುಕಿದ್ದವರ ಮತ್ತೂ 10 ಮಂದಿಯ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಈ ದುರಂತದಲ್ಲಿ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಈ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​ಗೆ ಪತ್ರ ಬರೆದಿರುವ ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೇರಸ್​​​​​ ಪ್ರವಾಹ ಮತ್ತು ಅದ್ರಿಂದಾದ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ.

ಇನ್ನು ಜರ್ಮನಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 5.9 ಬಿಲಿಯನ್ ಯೂರೋ ನಷ್ಟ ಸಂಭವಿಸಿದೆ. ಅಂದ್ರೆ ರೂಪಾಯಿ ಲೆಕ್ಕದಲ್ಲಿ 5 ಲಕ್ಷದ 14 ಸಾವಿರ ಕೋಟಿ ರೂಪಾಯಿಯಷ್ಟಾಗುತ್ತೆ.

-masthmagaa.com

Contact Us for Advertisement

Leave a Reply