ಅಮೆರಿಕ! ನಿನಗೆ ನಾಚಿಕೆಯಾಗಬೇಕು! ಇದೆಂಥಾ ಮಾನವ ಹಕ್ಕು, ಪ್ರಜಾಪ್ರಭುತ್ವ!?

masthmagaa.com:

ಅಮೆರಿಕದಲ್ಲಿ ಪೊಲೀಸರ ಕೈಯಲ್ಲೇ ಮತ್ತೊಬ್ಬ ಕಪ್ಪು ವರ್ಣೀಯನ ಹತ್ಯೆ ಆಗಿದೆ. 21 ವರ್ಷದ ರ್ಯಾನ್ ಲೇರೋಕ್ಸ್ ನನ್ನ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲೇರೋಕ್ಸ್ ಡ್ರೈವ್ ಥ್ರೂ ಮೆಕ್ ಡಾನಲ್ಡ್ಸ್ ಗೆ ಹೋಗಿ ಕಾರಿನಲ್ಲಿ ಕುಳಿತುಕೊಂಡೇ ಫುಡ್ ಆರ್ಡರ್ ಮಾಡಿದ್ದ. ಆದ್ರೆ ‘ಆಮೇಲೆ ಬಿಲ್ ಪೇ ಮಾಡಲ್ಲ ಅಂತ ಹೇಳ್ದ. ಹಾಗೇ ತನ್ನ SUV ಕಾರನ್ನೂ ತೆಗೆಯಲ್ಲ’ ಅಂತ ಹೇಳಿ ಅಲ್ಲೇ ಎಲ್ಲಾ ಬ್ಲಾಕ್ ಮಾಡಿಬಿಟ್ಟ ಅಂತ ಪೊಲೀಸರಿಗೆ ಕಾಲ್ ಹೋಯ್ತು. ಸ್ಥಳಕ್ಕೆ ಬಂದ ಪೊಲೀಸರು ನೋಡಿದಾಗ, ‘ಆತ ಕಾರಿನ ಒಳಗೆ ಡ್ರೈವರ್ ಪಕ್ಕದ ಸೀಟಿನಲ್ಲಿ ಒಂದು ಗನ್ ಕೂಡ ಇಟ್ಟುಕೊಂಡಿರೋದು ನಮಗೆ ಕಾಣಿಸ್ತು’ ಅಂತ ಹೇಳಿದ್ದಾರೆ. ಆಗ ಅಧಿಕಾರಿಗಳು ತಮ್ಮ ಬಂದೂಕುಗಳನ್ನ ಆತನೆಡೆಗೆ ಪಾಯಿಂಟ್ ಮಾಡಿ., ‘ಕೂಡಲೇ ಎರಡೂ ಕೈಗಳನ್ನ ಮೇಲೆತ್ತಿ, ನಿನ್ನ ಎಡಗೈನಿಂದ ಕಾರಿನ ಲೆಫ್ಟ್ ಡೋರ್ ಓಪನ್ ಮಾಡು’ ಅಂತ ಪದೇ ಪದೇ ಎಚ್ಚರಿಕೆ ಕೊಟ್ಟರೂ ಆತ ಇಳಿಯಲಿಲ್ಲ. ಆಗ ಪಲೀಸರು ಶೀಲ್ಡ್ ಅಡ್ಡ ಹಿಡಿದುಕೊಂಡು ಕಾರ್ ಬಳಿ ಹೋಗಿ ಕಾರಿನ ಮುಂದೆ STOP STICKಗಳನ್ನ ಇಟ್ಟಿದ್ದಾರೆ. ಸ್ಟಾಪ್ ಸ್ಟಿಕ್ ಅಂದ್ರೆ ಅದರ ಒಳಗೆ ಚೂಪಾದ ಮೊಳೆಯಂತ ರಚನೆ ಇರುತ್ತೆ. ಒಂದು ವೇಳೆ ವಾಹನ ಅದರ ಮೇಲೆ ಮೂವ್ ಆದರೂ ಪಂಚರ್ ಆಗುತ್ತೆ. ಅದನ್ನ ಇಟ್ಟಿದ್ದಾರೆ. ಹಾಗೇ ಮೆಕ್ ಡಾನಲ್ಡ್ಸ್ ನ ಡ್ರೈವ್ ಥ್ರೂ ವಿಂಡೋದಲ್ಲಿ ಒಂದು ಕ್ಯಾಮರಾ ಇಟ್ಟು ಲೇರೋಕ್ಸ್ ಗನ್ ಮುಟ್ಟುತ್ತಾನಾ ಇಲ್ವಾ ಅಂತ ಕಂಟಿನ್ಯೂಸ್ ಮಾನಿಟರಿಂಗ್ ಕೂಡ ಮಾಡ್ತಿದ್ರು. ಆಗ ಇದ್ದಕ್ಕಿದ್ದ ಹಾಗೆ ಆತ ಸೀಟಿನಲ್ಲಿ ಒರಗಿ ಕೂತಿದ್ದವನು ಎದ್ದು ನೇರ ಕೂತ. ಅಷ್ಟೇ., ಇಬ್ಬರು ಪೊಲೀಸ್ ಅಧಿಕಾರಿಗಳು ‘ಹಿ ಇಸ್ ಅಪ್’ – ಅಂದ್ರೆ, ‘ಅವ್ನು ಎದ್ದ’ ಅಂತ ಕೂಗಿದ್ದಾರೆ. ಕೂಡಲೇ ಕಾರಿನ ವಿಂಡೋ ಗಾಜುಗಳನ್ನ ಪುಡಿ ಮಾಡುತ್ತಾ ನುಗ್ಗಿದ ಪೊಲೀಸರ ಗುಂಡುಗಳು ಲೆರೋಕ್ಸ್ ದೇಹ ಹೊಕ್ಕಿದ್ದವು. ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಕೂಡ ಆತ ಬದುಕುಳಿಯಲಿಲ್ಲ. ಈಗ ಘಟನೆ ಸಂಬಂಧ ನಾಲ್ವರೂ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಆ ನಾಲ್ವರೂ ವೈಟ್ ಅಮೆರಿಕನ್ಸ್. ಇಲ್ಲಿ ಗಮನಿಸಬೇಕಾದ ಸಂಗತಿ ಅಂದ್ರೆ ಲೇರೋಕ್ಸ್ ಇಲ್ಲಿ ಗುಂಡನ್ನ ಹಾರಿಸಿಯೇ ಇರಲಿಲ್ಲ.! ಇದನ್ನೆಲ್ಲ ನೋಡಿದಾಗ ಇಡೀ ಜಗತ್ತಿಗೆ ಮಾನವ ಹಕ್ಕುಗಳ ಪಾಠ ಮಾಡೋ ಅಮೆರಿಕಕ್ಕೆ ಹೇಳ್ಬೇಕು ಅನ್ಸುತ್ತೆ.., ಅಮೆರಿಕ! ನಿನಗೆ ನಾಚಿಕೆಯಾಗಬೇಕು ಅಂತ! ಕೇಳ್ಬೇಕು ಅನ್ಸುತ್ತೆ.., ಇದೆಂಥಾ ಮಾನವ ಹಕ್ಕು, ಪ್ರಜಾಪ್ರಭುತ್ವ ಅಂತ!?

-masthmagaa.com

Contact Us for Advertisement

Leave a Reply